ಬಾಕಿ ಕೂಲಿ ಪಾವತಿಗೆ ಆಗ್ರಹ

Narega
ನರೇಗಾ ಕಾರ್ಮಿಕರ ಬಾಕಿ ವೇತನ ತಣ ಪಾವತಿಸಬೇಕು ಎಂದು ಆಗ್ರಹಿಸಿ ಸವದತ್ತಿ ತಾಲೂಕಿನ ಮರಕುಂಬಿಯ ನರೇಗಾ ಕೂಲಿ ಕಾರ್ಮಿಕರು ಶುಕ್ರವಾರ ಬೆಳಗಾವಿ ಜಿಪಂ ಕಚೇರಿ ಎದುರು ಪ್ರತಿಭಟಿಸಿದರು. ಶಕುಂತಲಾ ಇಳಗೆ, ಇರ್ಫಾನ್​ ಬಾಗೇವಾಡಿ ಇತರರಿದ್ದರು.
Published on

ಬೆಳಗಾವಿ: ನರೇಗಾ ಕಾರ್ಮಿಕರ ಬಾಕಿ ವೇತನ ತಣ ಪಾವತಿಸಬೇಕು ಎಂದು ಆಗ್ರಹಿಸಿ ಸವದತ್ತಿ ತಾಲೂಕಿನ ಮರಕುಂಬಿಯ ನರೇಗಾ ಕೂಲಿ ಕಾರ್ಮಿಕರು ಕರ್ನಾಟಕ ರಾಷ್ಟ್ರ ಸಮಿತಿ ಪದ ನೇತೃತ್ವದಲ್ಲಿ ಶುಕ್ರವಾರ ಜಿಪಂ ಕಚೇರಿ ಎದುರು ಪ್ರತಿಭಟಿಸಿದರು. 4 ತಿಂಗಳಿನಿಂದ ವೇತನ ನೀಡುತ್ತಿಲ್ಲ. ನರೇಗಾ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸಾಲಗಾರರು ತೊಂದರೆ ನೀಡುತ್ತಿದ್ದಾರೆ. ಬೆವರು ಸುರಿಸಿ ದುಡಿದ ಕೆಲಸಕ್ಕೆ ನಾವು ವೇತನ ಕೇಳುತ್ತಿದ್ದೇವೆ. ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ವಂಚನೆಯಾಗುತ್ತಿದೆ. ಸವದತ್ತಿ ತಾಲೂಕಿನ ಮರಕುಂಬಿ ಗ್ರಾಪಂನಲ್ಲಿ ಸೇವೆ ಸಲ್ಲಿಸುತ್ತಿರುವ ನರೇಗಾ ಕಾರ್ಮಿಕರಿಗೆ 4 ತಿಂಗಳಿಂದ ವೇತನ ನೀಡಿಲ್ಲವೆಂದು ಆರೋಪಿಸಿದರು. ಶಕುಂತಲಾ ಇಳಗೆ, ಇರ್ಫಾನ್​ ಬಾಗೇವಾಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net