ಹೂಳೆತ್ತುವುದರಿಂದ ಅಂತರ್ಜಲ ಹೆಚ್ಚಳ

11kabbur1
Published on

ಕಬ್ಬೂರ: ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಬೋಧಿಸಬೇಕು. ಶಾಲೆ ಸೌಂದರ್ಯೀಕರಣದಿಂದ ಮಕ್ಕಳು ಕಲಿಕೆಯಲ್ಲಿ ತೊಡಗಲು ಸಾಧ್ಯ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಮೀರಾಪುರಹಟ್ಟಿ ಗ್ರಾಮದಲ್ಲಿ 1.60 ಕೋಟಿ ರೂ. ಅನುದಾನದಲ್ಲಿ ನಬಾರ್ಡ್ ಯೋಜನೆಯಡಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ಉದ್ಘಾಟನೆ, ಸಣ್ಣ ನೀರಾವರಿ ಇಲಾಖೆಯಡಿ 60 ಲಕ್ಷ ರೂ. ವೆಚ್ಚ ಹಾಗೂ ವಡ್ರಾಳ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೆರೆ ಹೂಳೆತ್ತುವುದರಿಂದ ನೂರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಸತೀಶ ಜಾಗನೂರೆ, ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ, ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ವಿಜಯ ಕೋಠಿವಾಲೆ, ಶಿವಪ್ಪ ಖೋತ, ಲಕ್ಷ್ಮಣ ಖೋತ, ಅಪ್ಪಾಸಾಹೇಬ ದಡ್ಡಿ, ಮಾರುತಿ ಹುಡೇದ, ಅಭಿಯಂತ ಶಾಂತಾರಾಮ ಎಂಟೆತ್ತಿನವರ, ಎ.ಇ. ಕಾಕ್ಕೋಳ ಗುಂಡು ಪುಲಗಡ್ಡಿ, ಭೀಮಗೌಡ ಖೋತ, ಶ್ರೀಶೈಲ ತಲ್ಲೂರ, ರಾಯಪ್ಪ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net