ದೂಧಗಂಗಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Swiming death Raichur
Published on

ಬೋರಗಾಂವ: ಮಹಿಳೆ ಯೋರ್ವಳು ದೂಧಗಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಶಮನೆವಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವನಿತಾ ಪಂಕಜ ಸುವತ (29)ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ರಾಜಸ್ಥಾನದ ಆಥುನಾ ಗ್ರಾಮದ ಪಂಕಜ ಎಂಬಾತನ ಜತೆ ವನಿತಾಳ ಮದುವೆಯಾಗಿತ್ತು.

ಪಂಕಜ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಇದರಿಂದ ಬೇಸರಗೊಂಡ ವನಿತಾ ಮೂರು ತಿಂಗಳ ಹಿಂದೆ ತವರು ಮನೆಗೆ ಬಂದಿದ್ದಳು. ಮಂಗಳವಾರ ತಾಯಿಯೊಂದಿಗೆ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳಿಗೆ ಮೂವರು ಪುತ್ರರು ಇದ್ದಾರೆ. ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net