ಐಐಐಟಿ-ಬಿಯಿಂದ ಡ್ಯುಯಲ್ ಸರ್ಟಿಫಿಕೇಷನ್ ಕೋರ್ಸ್ ಆರಂಭ

Vijayavani - Logo
Published on

ಬೆಂಗಳೂರು: ದೇಶದ ಮುಂಚೂಣಿ ವೃತ್ತಿಪರ ಶಿಕ್ಷಣ ಸಂಸ್ಥೆ ಇಂಟರ್‌ನ್ಯಾಷನಲ್ ಇನ್‌ಸ್ಟ್ಟಿಟ್ಯೂಟ್ ಆ್ ಇನ್ಫಾರ್ಮೇಶನ್ ಟೆಕ್ನಾಲಜಿ - ಬೆಂಗಳೂರು (ಐಐಐಟಿ-ಬಿ) 2024ರ ಫೆಬ್ರವರಿ ತಿಂಗಳಿನಿಂದ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್‌ನಲ್ಲಿ ಎಕ್ಸಿಕ್ಯುಟಿವ್ ಎಂ.ಟೆಕ್ ಕೋರ್ಸ್ ಪ್ರಾರಂಭಿಸಲಿದೆ.

ಈ ಕುರಿತು ಮಾತನಾಡಿರುವ ಐಐಐಟಿ-ಬಿ ಸಹಾಯಕ ಪ್ರಾಧ್ಯಾಪಕ ಪ್ರೊ. ವಿ.ಎನ್.ಮುರಳೀಧರ, ಎಂಟೆಕ್ ಪ್ರೋಗ್ರಾಂ ಬೆಂಗಳೂರಿನಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಶುಕ್ರವಾರ ಮತ್ತು ಶನಿವಾರದಂದು ತರಗತಿಗಳಿಗೆ ಹಾಜರಾಗಲು ಅವಕಾಶ ಸಿಗಲಿದೆ, ಎರಡೂವರೆ ವರ್ಷದ ಅವಧಿಯಲ್ಲಿ ಈ ಕೋರ್ಸ್ ಪೂರ್ಣಗೊಳಿಸಬಹುದು. ವಿದ್ಯಾರ್ಥಿಗಳಿಗೆ ಎರಡು ವೃತ್ತಿಪರ ಸರ್ಟಿಫಿಕೇಟ್‌ಗಳನ್ನು ಒಟ್ಟಿಗೆ ಪಡೆಯಲು ಅನುಮತಿ ದೊರೆತಿದೆ ಎಂದಿದ್ದಾರೆ.

ಉದ್ಯಮ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ವೃತ್ತಿಪರರನ್ನು ಅಭಿವೃದ್ಧಿಪಡಿಸುವುದು ಐಐಐಟಿ-ಬಿಯ ಸ್ನಾತಕೋತ್ತರ ಕಾರ್ಯಕ್ರಮಗಳ ಗುರಿಯಾಗಿದೆ. ಅಂತಹ ಶಿಕ್ಷಣವು ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳ ಮೂಲಭೂತ ತತ್ವಗಳ ಗ್ರಹಿಕೆ, ವಿಶೇಷತೆಯ ನಿರ್ದಿಷ್ಟ ವಿಷಯದ ಆಳವಾದ ತಿಳಿವಳಿಕೆ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಐಐಐಟಿ-ಬೆಂಗಳೂರು ನಿರ್ದೇಶಕ ಪ್ರೊ. ದೇಬಬ್ರತ ಮಾತನಾಡಿ, ಉದ್ಯಮದ ಅಗತ್ಯಕ್ಕೆ ಹೊಂದಿಕೆಯಾಗುವ ಅತ್ಯಾಧುನಿಕ ಶಿಕ್ಷಣವನ್ನು ಒದಗಿಸಲು ಸಂಸ್ಥೆ ಬದ್ಧವಾಗಿದೆ. ಎಂ.ಟೆಕ್ ಕಾರ್ಯಕ್ರಮವು ಶೈಕ್ಷಣಿಕ ಮತ್ತು ವೃತ್ತಿಪರ ಬದ್ಧತೆಯನ್ನು ಖಚಿತಪಡಿಸುವ ಜತೆಗೆ ವಿದ್ಯಾರ್ಥಿಗಳು ಸಾಮಾನ್ಯ ಎಂ.ಟೆಕ್ ಕಾರ್ಯಕ್ರಮದಂತೆಯೇ ಅದೇ ಪ್ರಾಮುಖ್ಯತೆ ಹೊಂದಿರುವ ಪದವಿ ಪಡೆಯುತ್ತಾರೆಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net