

ಬೆಳಗಾವಿ: ಉತ್ತರ ಪ್ರದೇಶ ಪ್ರಯಾಗರಾಜನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ವೇಳೆ ನಾಮಪತ್ತೆಯಾಗಿದ್ದ ಬೆಳಗಾವಿ ನಗರದ ತಾಯಿ, ಪುತ್ರಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಉತ್ತರ ಪ್ರದೇಶ ಸರ್ಕಾರವು ಮೃತಪಟ್ಟಿರುವ ಭಕ್ತರ ಬಗ್ಗೆ ಮಾಹಿತಿ ಖಚಿತ ಪಡಿಸಿಲ್ಲ.
ಬೆಳಗಾವಿ ವಡಗಾಂವದ ಜ್ಯೋತಿ ಹತ್ತರವಾಠ (50), ಪುತ್ರಿ ಮೇಘಾ ಹತ್ತರವಾಠ (20) ಮೃತಪಟ್ಟವರು. ಪ್ರಯಾಗರಾಜನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮಂಗಳವಾರ ರಾತ್ರಿ ಕಾಲ್ತುಳಿತದ ವೇಳೆ ತಾಯಿ ಮತ್ತು ಪುತ್ರ ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಬೆಳಗಾವಿಯಲ್ಲಿರುವ ಕುಟುಂಬಸ್ಥರು ಅವರ ಮೊಬೈಲ್ ಸಂಪರ್ಕಿಸಿದ್ದಾರೆ. ಆದರೆ, ಪೋನ್ ರಿಂಗ್ ಆಗುತ್ತಿದ್ದರು ರಿಸೀವ್ ಮಾಡದ ಹಿನ್ನೆಲೆ ಆತಂಕಗೊಂಡಿದ್ದರು. ಆದರೆ, ಇದೀಗ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಜ.26ರಂದು ಬೆಳಗಾವಿ ನಗರದಿಂದ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 13 ಜನ ಭಕ್ತರು ಒಟ್ಟಿಗೆ ಪ್ರಯಾಗರಾಜಗೆ ಪ್ರಯಾಣ ಬೆಳಸಿದ್ದರು. ಇವರಲ್ಲಿ ಕೆಲವರು ಮಾತ್ರ ಮೊಬೈಲ್ ಸಂಪರ್ಕ ಸಿಗುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
........
ಕೋಟ್ಸ್
ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ವೇಳೆ ಬೆಳಗಾವಿ ನಗರದ ಭಕ್ತರು ನಾಪತ್ತೆಯಾಗಿರುವ ಕುರಿತು ಅಲ್ಲಿನ ಜಿಲ್ಲಾಡಳಿತ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಮೃತಪಟ್ಟಿರುವ ಕುರಿತು ಯಾರು ಅಧಿಕೃತವಾಗಿ ಮಾಹಿತಿ ನೀಡಿಲ್ಲ.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
.........
ಕೋಟ್ಸ್
ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ವೇಳೆ ನಾಮಪತ್ತೆಯಾಗಿದ್ದ ಬೆಳಗಾವಿ ನಗರದ ತಾಯಿ, ಪುತ್ರಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಕುರಿತು ಅಲ್ಲಿನ ಸರ್ಕಾರ ಖಚಿತಪಡಿಸಿಲ್ಲ. ಬೆಳಗಾವಿ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು, ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಲಾಗುವುದು.
-ಅಭಯ ಪಾಟೀಲ, ಶಾಸಕ