ಡಾ. ಸತೀಶ ಜಾರಕಿಹೊಳಿ  ಕ್ರಿಕೆಟ್‌ ಟ್ರೋಫಿ; ಬೆಳಗಾವಿ ಕೆ. ಆರ್‌ ಶೆಟ್ಟಿ ಮುಡಿಗೆ

criket.jpg
Published on
ಬೆಳಗಾವಿ: ನಗರದ ಸರ್ದಾರ್ ಮೈದಾನದಲ್ಲಿ ಆಯೋಜಿಸಲಾದ ಡಾ. ಸತೀಶ ಜಾರಕಿಹೊಳಿ ಕರ್ನಾಟಕ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಟ್ರೋಫಿಯನ್ನು ಬೆಳಗಾವಿ ಕೆ. ಆರ್‌ ಶೆಟ್ಟಿ ಕಿಂಗ್ ಕ್ರಿಕೆಟ್ ಟಿಮ್ ಮುಡಿಗೇರಿಸಿಕೊಂಡರು.ಸರ್ದಾರ್ ಆಟದ‌ ಮೈದಾನದಲ್ಲಿ ಬಾಂತಕಡೆ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಬೆಳಗಾವಿ ಜಿಲ್ಲಾ ವಾಲ್ಮೀಕಿ ಸಮಾಜ ನೇತೃತ್ವದಲ್ಲಿ ನಡೆದ ಡಾ. ಸತೀಶ ಜಾರಕಿಹೊಳಿ ಕ್ರಿಕೆಟ್ ಪಂದ್ಯಾವಳಿಯ ಟ್ರೋಪಿಯನ್ನು ಬೆಳಗಾವಿ ಕೆ. ಆರ್‌ ಶೆಟ್ಟಿ ಕಿಂಗ್ ಕ್ರಿಕೆಟ್‌ ಟೀಮ್‌ ಗೆದ್ದು ಬಿಗಿದರು.ಕಳೆದ 15 ದಿನಗಳಿಂದ ಆಯೋಜಿಸಲಾದ ಡಾ. ಸತೀಶ ಜಾರಕಿಹೊಳಿ ಟ್ರೋಫಿ ಕ್ರಿಕೆಟ್ ನಲ್ಲಿ 46 ಪಂದ್ಯಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು. ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ ಕ್ರೀಡಾಪಟುಗಳು ಪಂದ್ಯದ ಗೆಲುವಿಗಾಗಿ ಉತ್ತಮ ಸೆಣಸಾಟ ನಡೆಸಿ, ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಇಂದು ನಡೆದ ಕೊನೆಯ ಹಂತದ ಪೈನಲ್‌ ಪಂದ್ಯದಲ್ಲಿ ಬೆಳಗಾವಿಯ ಕೆ. ಆರ್‌ ಶೆಟ್ಟಿ ಕಿಂಗ್‌ ಕ್ರಿಕೆಟ್ ಟಿಮ್ ಹಾಗೂ ಕಾರವಾರ ಅರ್ಷ ಟಿಮ್‌ ತೀವ್ರ ಸೆಣಸಾಟ ನಡೆಸಿದವು, ಕೊನೆಯ ಇನಿಂಗ್ಸ್‌ ನಲ್ಲಿ ಎರಡು ಪಂದ್ಯ ಉತ್ತಮ ನೀಡದವು. ಆದರೆ, ಕೊನೆಯ ಓವರ್‌ ಎಸೆತಗಳಲ್ಲಿ ಸಮಬಲ ನೀಡದವು. ಮತ್ತೆ 10 ನಿಮಿಷಗಳ ಕಾಲ ನಡೆದ ಆಟದಲ್ಲಿ ಬೆಳಗಾವಿಯ ಕೆ. ಆರ್‌ ಶೆಟ್ಟಿ ಕಿಂಗ್‌ ಕ್ರಿಕೆಟ್ ಗೆಲುವು ತಮ್ಮದಾಗಿಸಿಕೊಂಡಿತ್ತು.ಆಕರ್ಷಕ( ಆಕ್ರಮಣಕಾರಿ) ಆಟಗಾರ ಆಜಿದ್‌ , ಅಬ್ದುಲ್‌ , ಪಂಧ್ಯ ಶ್ರೇಷ್ಠ ನರೇಂದ್ರ ಮಂಗಳೂರು, ಬೆಸ್ಟ್‌ ಬಾಲರ್‌ ಕೃಷ್ಣಾ ಚಂದ್ರಶೇಖರ್‌, ಬೆಸ್ಟ್ ಆಟಗಾರರುಗೌಸ್‌ ಶೇಕ್‌, ವಾಜಿದ್‌, ಗೌರೀಶ, ಸರಣಿ ಶ್ರೇಷ್ಠ ಆಟಗಾರರಾಗಿ ಸಂತೋಷ ಪಾಟೀಲ ಅವರು ಹೊರಹೊಮ್ಮಿದರು.ಈ ವೇಳೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯಪ್ಪಗೋಳ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಮಾರುತಿ ತೋರ್ಲೆ , ಸಂಜಯ ನಾಯಕ, ರಾಜಶೇಖರ ತಳವಾರ್, ಮಿಲಿಂದ ಬಾತಕಂಡೆ, ದಿನೇಶ ಬಾಗಡೆ, ಪ್ರವೀಣ್ ಪಾಟೀಲ, ಬಸವರಾಜ ದೊಡ್ಡಮನಿ, ಮಂಜುನಾಥ ದೆಗಾನಟ್ಟಿ, ವಿಜಯ ತಳವಾರ, ಜಂಗಲಿಸಾಬ್ ನಾಯಕ, ಬಸವರಾಜ ಡುಂಮ ನಾಯಕ, ಸಿದ್ದಪ್ಪ ಕಾಂಬಳೆ , ಜಾನ್ ಬೆಳಿ ಕಟ್ಟಿ, ಹಾಗೂ ಉಪಸ್ಥಿತರಿದ್ದರು .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net