ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹ

12 SARAG 1
ಸರಗೂರು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ದಸಂಸ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರುಕೀಯಾ ಬೇಗಂ ಅವರಿಗೆ ಮನವಿ ಸಲ್ಲಿಸಲಾಯಿತು. ನಾರಾಯಣ್, ಗೊವಿಂದರಾಜು, ದೊಡ್ಡಸಿದ್ದು, ಸಣ್ಣ ಕುಮಾರ್ ಇತರರು ಇದ್ದರು.
Published on

ಸರಗೂರು: ತಾಲೂಕು ಕೇಂದ್ರದಲ್ಲಿ ಸರ್ಕಾರದ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ಜಮೀನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳು ನೀಡುತ್ತಿರುವ ಕಿರುಕುಳ ತಪ್ಪಿಸಬೇಕು. ಕಂದಾಯ ಮತ್ತು ಅರಣ್ಯ ಜಂಟಿ ಸರ್ವೇ ನಡೆಸಿ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಸರ್ಕಾರ ಕೇವಲ ತಾಲೂಕು ಕೇಂದ್ರಗಳನ್ನಾಗಿ ಘೋಷಣೆ ಮಾಡಿ, ಕಚೇರಿ ಕೆಲಸ ಕಾರ್ಯಗಳನ್ನು ಬೇರೆ ತಾಲೂಕಿನಲ್ಲಿ ನಿರ್ವಹಿಸುವುದಾದರೆ ಹೊಸ ತಾಲೂಕಿನ ಘೋಷಣೆ ಏಕೆ? ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬೇರೆ ತಾಲೂಕು ಕೇಂದ್ರಗಳಿಗೆ ಹೋಗುವುದಾದರೆ ಹೊಸ ತಾಲೂಕಿನ ಅವಶ್ಯಕತೆ ಏನಾದರೂ ಇದೆಯಾ? ಎಂದು ಪ್ರಶ್ನಿಸಿದರು.

ಸರಗೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಸುಮಾರು 9 ವರ್ಷಗಳೇ ಕಳೆದಿವೆ. ಆದರೆ ತಾಲೂಕು ಕೇಂದ್ರ ಸ್ಥಾನದಲ್ಲಿ ತಹಸೀಲ್ದಾರ್ ಕಚೇರಿ, ಪಶು ಇಲಾಖೆ, ನೀರಾವರಿ ಇಲಾಖೆ, ಎಪಿಎಂಸಿ, ಪಟ್ಟಣ ಪಂಚಾಯಿತಿ ಬಿಟ್ಟರೆ ಬೇರೆ ಯಾವ ಕಚೇರಿಗಳು ಸಹ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕರು ಕಚೇರಿಯ ಕೆಲಸ ಕಾರ್ಯಗಳಿಗೆ ಎಚ್.ಡಿ ಕೋಟೆಗೆ ಅಲೆಯುವಂತಹ ಪರಿಸ್ಥಿತಿ ಇದೆ. ಇದರಿಂದ ಗೊಂದಲಕ್ಕೊಳಗಾಗಿರುವ ಸಾರ್ವಜನಿಕರು ಸರಗೂರು ತಾಲೂಕು ಎನ್ನುವುದನ್ನು ಮರೆತು ಎಚ್.ಡಿ.ಕೋಟೆ ತಾಲೂಕು ಎನ್ನುವಂತಾಗಿದ್ದಾರೆ. ತಾಲೂಕಿನ ವಿವಿಧ ಕಡೆ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಜಿಲ್ಲಾ ಉಪ ಪ್ರಧಾನ ಸಂಚಾಲಕ ದೊಡ್ಡಸಿದ್ದು, ದಸಂಸ (ಅಂಬೇಡ್ಕರ್ ವಾದ)ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿದರು. ಎಚ್.ಡಿ ಕೋಟೆ ತಾಲೂಕು ಸಂಚಾಲಕ ಕಟ್ಟೆಮನಹಳ್ಳಿ ಸಣ್ಣ ಕುಮಾರ್, ರೈತ ಸಂಘದ ಕಾರ್ಯಾಧ್ಯಕ್ಷ ಬಿರ್ವಾಳ್ ಮಹಲಿಂಗು, ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಕೃಷ್ಣ, ಗ್ರಾಪಂ ಸದಸ್ಯ ಶಿವಲಿಂಗಯ್ಯ ಯಶವಂತಪುರ, ತಾಲೂಕು ಸಂಘಟನೆ ಸಂಚಾಲಕ ಮಹದೇವಸ್ವಾಮಿ, ಮೊಳೆಯೂರು ಕಾವಲ್ ನಾಗೇಂದ್ರ, ಮಣಿಕಂಠ, ಮಹೇಶ್, ವೆಂಕಟರಾಮು, ಕೆಂಪರಾಜು, ರೈತ ಸಂಘದ ಅಧ್ಯಕ್ಷ ಬಿರ್ವಾಳ್ ಚನ್ನನಾಯಕ, ಕರ್ನಾಟಕ ಭೀಮಾ ಸೇನೆ ತಾಲೂಕು ಅಧ್ಯಕ್ಷ ಹೂವಿನಕೊಳ ಮಹೇಂದ್ರ, ಕಾರ್ಯದರ್ಶಿ ಹಳಿಯೂರು ಮೂರ್ತಿ, ಗ್ರಾಪಂ ಸದಸ್ಯ ಶಿವಚನ್ನ ನಾಗರಾಜು, ಮುಳ್ಳೂರು ಲೋಕೇಶ್, ಮಸಹಳ್ಳಿ ನವೀನ್, ತಾಲೂಕು ಸಂಚಾಲಕ ಮಹೇಶ್, ಆನಂದ, ರವಿ, ಕಾಳಪ್ಪಾಜಿ, ರಾಜಣ್ಣ, ಕಳ್ಳಿ ಮುದ್ದನಹಳ್ಳಿ ಚಂದ್ರು, ವಾಟಾಳ್ ನಾಗರಾಜು, ಬೊಮ್ಮೇನಹಳ್ಳಿ ಕುಮಾರ್, ಸೋಮಯ್ಯ ಕೆ.ಆರ್.ನಗರ, ಜಿಲ್ಲಾ ಮಹಿಳಾ ಒಕ್ಕೂಟದ ಮಹಾದೇವಮ್ಮ, ಮಹೇಶ್, ಕಾರ್ಯಾಚಯ ಶಂಕರ್, ಚಿಕ್ಕ ಚೆಲುವ, ಮಹದೇವಸ್ವಾಮಿ, ಇಂದ್ರಕುಮಾರ್, ಆರ್‌ಪಿಐ ಮಹಿಳಾ ಜಿಲ್ಲಾ ಅಧ್ಯಕ್ಷೆ ಅನುಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net