ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಿ: ಡಿಎಸ್‌ಎಸ್ ಮುಖಂಡ ಶಿವಣ್ಣ ಒತ್ತಾಯ

1 (4)
Published on

ಮಂಡ್ಯ: ಅಸ್ಪಶ್ಯತಾ ಪ್ರಕರಣ ನಡೆದು ವಾರ ಕಳೆದರೂ ಆರೋಪಿ ಜತೆ ಶಾಮೀಲಾಗಿ ಕಾನೂನು ವಿರೋಧಿ ಧೋರಣೆ ಅನುಸರಿಸರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಮುಖಂಡ ಶಿವಣ್ಣ ಒತ್ತಾಯಿಸಿದರು.

ಜೂ.21ರಂದು ಶ್ರೀರಂಗಪಟ್ಟಣ ತಾಲೂಕು ನೇರಲಕೆರೆ ಗ್ರಾಮದಲ್ಲಿ ನಂಜಯ್ಯ ಎಂಬ ದಲಿತ ಸಮುದಾಯದ ವ್ಯಕ್ತಿಗೆ ಎಲ್ಲರಂತೆ ಸಮಾನವಾಗಿ ಊಟ, ತಿಂಡಿ ನೀಡದೆ ಅಪಮಾನ ಎಸಗಿದ್ದಾರೆ. ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಘಟನೆ ಸಂಬಂಧ ಅರಕೆರೆ ಪೊಲೀಸರಿಗೆ ದೂರು ನೀಡಿದರೆ, ಸ್ಥಳೀಯ ಪಂಚಾಯಿತಿ ಮುಖಂಡರನ್ನು ಕರೆಸಿ ರಾಜೀ ಸಂಧಾನ ಮಾಡಿಸಲು ಯತ್ನಿಸಿದ್ದಾರೆ. ಒತ್ತಡ ಹೆಚ್ಚಾದ ನಂತರ ಜೂ.27ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಈವರೆವಿಗೂ ಆರೋಪಿಯನ್ನು ಬಂಧಿಸುವ ಕ್ರಮ ಕೈಗೊಂಡಿಲ್ಲ. ಅಸ್ಪಶ್ಯತಾ ಆಚರಣೆ ಇನ್ನೂ ಜಾರಿಯಲ್ಲಿದ್ದರೂ ಅದಕ್ಕೆ ಕಾನೂನಿನ ಮೂಲಕ ಅಧಿಕಾರಿಗಳೇ ಬೆಂಬಲವಾಗಿ ನಿಲುತ್ತಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೀಘ್ರ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಎನ್.ರಮಾನಂದ, ಸಿದ್ದರಾಜು, ದ್ಯಾವರಸಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net