

ಚಿಕ್ಕಮಗಳೂರು: ಡಿಸಿಸಿ ಬ್ಯಾಂಕ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಿಗೆ ಸಂವಿಧಾನದ ಶಾಸನಬದ್ಧವಾದ ಮೀಸಲಾತಿಯನ್ನು ಜಾರಿಗೊಳಿಸಿ ರೋಸ್ಟರ್ ನಿಯಮದಡಿ ಮುಂಬಡ್ತಿ ನೀಡಬೇಕು ಎಂದು ಡಿಎಸ್‌ಎಸ್ ಜಿಲ್ಲಾ ಮುಖಂಡರು ಬ್ಯಾಂಕ್‌ನ ಉಪಾಧ್ಯಕ್ಷ ಶಂಕರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಅನೇಕ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರ ನೇಮಕಾತಿಗೊಳಿಸಿದೆ. ಆದರೆ ಬ್ಯಾಂಕಿನ ಎರಡನೇ ಬ್ಯಾಚ್‌ನ ನೌಕರರಿಗೂ ಜೇಷ್ಠತಾ ಪಟ್ಟಿಯನ್ನು ತಯಾರಿಸಿದ್ದು, ಈ ಜೇಷ್ಟತಾ ಪಟ್ಟಿಯು ಸರಿಯಿಲ್ಲವೆಂದು ಹಿಂದಿನಿAದಲೂ ಆಕ್ಷೇಪಣೆ ಸಲ್ಲಿಸಿz್ದೆÃವೆ. ಆದರೆ ಯಾವ ಮಾನದಂಡದಿAದ ತಯಾರಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಬ್ಯಾಂಕಿನ ನೌಕರರಿಗೆ ಪದೋನ್ನತಿ ನೀಡಿರುವುದಿಲ್ಲ. ಇದನ್ನು ಪ್ರಶ್ನಿಸಿ ಆಡಳಿತ ಮಂಡಳಿಯ ವಿರುದ್ಧ ಹಿರಿಯ ನೌಕರರು ಮೊಕದ್ದಮೆ ಹೂಡಿದ ಬಳಿಕ ಕೇಸ್ ಹಿಂಪಡೆಯಲು ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಪರಿಶಿಷ್ಟ ಜಾತಿ, ವರ್ಗದ ನೌಕರರಿಗೆ ಮೀಸಲಾತಿ ನೀಡುತ್ತೇವೆ ಎಂದು ನಿರ್ಣಯ ಕೈಗೊಂಡ ಬಳಿಕ ಮೊಖದ್ದಮೆ ಹಿಂಪಡೆಯಲಾಗಿದೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ, ವರ್ಗದ ನೌಕರರಿಗೆ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿರುತ್ತಾರೆ. ಆದರೆ ಚಿಕ್ಕಮಗಳೂರು ಮಾತ್ರ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿಲ್ಲ ಎಂದು ದೂರಿದರು.
ಸಹಕಾರ ಸಂಘಗಳ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಿಗೆ ನೇಮಕಾತಿ ಮತ್ತು ಪದೋನ್ನ ತಿ ಎರಡರಲ್ಲೂ ಸರ್ಕಾರದ ನಿಯಮದ ಪ್ರಕಾರ ಮೀಸಲಾತಿ ಅನ್ವಯ ಪದೋನ್ನತಿಯನ್ನು ನೀಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಸಂಘಟನಾ ಸಂಚಾಲಕ ರಮೇಶ್, ಮುಖಂಡರಾದ ಹುಣಸೇಮಕ್ಕಿ ಲಕ್ಷö್ಮಣ್, ಸುರೇಶ್ ಮತ್ತಿತರರಿದ್ದರು.