ಮಣಿಪುರ ಸರ್ಕಾರ ವಜಾಗೊಳಿಸಲು ದಸಂಸ ಆಗ್ರಹ

WhatsApp Image 2023-07-27 at 4.54.40 PM
Published on

ಹೊಸಪೇಟೆ: ಮಣಿಪುರದಲ್ಲಿ ಕುಕಿ ಜೋ ಬುಡಕಟ್ಟು ಸಮುದಾಯದ ಮಹಿಳೆಯರ ಮೇಲಿನ ಸಾಮೂಹಿಕ ಆತ್ಯಾಚಾರ ಹಾಗೂ ವಿವಸ್ತçಗೊಳಿಸಿ ಮೆರವಣಿಗೆ ನಡೆಸಿದವರನ್ನು ತಕ್ಷಣ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಒತ್ತಾಯಿಸಿದೆ.

ಈ ಕುರಿತು ದಸಂಸ ಪ್ರಮುಖರು ಗುರುವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟçಪತಿಗೆ ಮನವಿ ಸಲ್ಲಿಸಿ, ಕಳೆದ ೩ ತಿಂಗಳಿAದ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿAದ ಮಣಿಪುರ ನಲುಗಿ ಹೋಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಮುಖ್ಯಮಂತ್ರಿ ಬೀರೇನ್ ಸಿಂಗ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟçಪತಿ ಆಡಳಿತ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್.ದುರುಗೇಶ್, ತೆಗಿನಕೇರಿ ಕೊಟ್ರೇಶ್, ಹೆಚ್.ಬಿ.ಶ್ರೀನಿವಾಸ್, ಕಂಗಲ್ ಪರಶುರಾಮ್, ದೇವಪ್ರಿಯಾ, ಉದಯಕುಮಾರ್, ಬಿ.ಟಿ.ಗುದ್ದಿ ದುರುಗೇಶ್, ಬಿ.ಹನುಮಂತಪ್ಪ, ಗಂಗಾದರ ಹೊಸಹಳ್ಳಿ, ವಿರುಪಾಕ್ಷಿ, ಮೂಗಪ್ಪ, ಕಾನಮಡುಗು ದುರುಗಪ್ಪ, ಬಡಲಡಕು ದುರುಗೇಶ್, ಪರಶುರಾಮ್ ಪಕ್ಕೀರಪ್ಪ, ಕುಮಾರ್, ಚೌಡೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net