

ಚಿಕ್ಕಮಗಳೂರು: ದೇಶದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಒಳಮೀಸಲಾತಿ ಪರವಾದ ತೀರ್ಪನ್ನು ಸ್ವಾಗತಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಸಿದರು.
ಈ ವೇಳೆ ಮಾತನಾಡಿದ ಡಿಎಸ್ ಎಸ್ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತ್‌ಕುಮಾರ್, ನ್ಯಾಯಾಲಯದ ತೀರ್ಪಿನಂತೆ ಪರಿಶಿಷ್ಟ ಜಾತಿ, ಪಂಗಡ, ಉಪ ಪಂಡಗಳಿಗೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದರು.
ಮೂವತ್ತು ವರ್ಷಗಳ ಡಿಎಸ್‌ಎಸ್ ಹಾಗೂ ದಲಿತಪರ ಸಂಘಟನೆಗಳ ತೀವ್ರ ಹೊರಾಟದ ಫಲವಾಗಿ ಪರಿಶಿಷ್ಟರಿಗೆ ನ್ಯಾಯಸಮ್ಮತ ತೀರ್ಪು ಪ್ರಕಟಗೊಂಡಿದೆ. ೨೦೦೫ರಲ್ಲಿ ರಚನೆಯಾದ ನ್ಯಾ. ಎ.ಜೆ.ಸದಾಶಿವ ಅಧ್ಯಕ್ಷತೆಯ ಕಮಿಟಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಹಕರಿಸಿದ ಪ್ರತಿ ಸರ್ಕಾರಗಳಿಗೆ ದನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಒಳ ಮೀಸಲಾತಿಯ ಕೇಂದ್ರ ಬಿಂಧುವಾದ ನ್ಯಾ. ಎ.ಜೆ.ಸದಾಶಿವ ವರದಿಯ ಅನ್ವಯ ೧೫೧ ಜಾತಿಗಳಿಗೆ ತಮ್ಮ ಅವಧಿಯಲ್ಲಿ ನಾಗಮೋಹನ್‌ದಾಸ್ ವರದಿಯಂತೆ ಹೆಚ್ಚಳವಾಗಿರುವ ಮೀಸಲಾತಿಗೆ ಅನುಗುಣವಾಗುವಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಒಳ ಮೀಸಲಾತಿಯ ನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್.ಇ.ದೊಡ್ಡಯ್ಯ, ಎಂ.ಸಿ. ಜಯರಾಮಯ್ಯ, ತಾಲೂಕು ಸಂಚಾಲಕ ವಿನೀತ್, ರಂಗಯ್ಯ, ಅಣ್ಣಯ್ಯ, ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಹುಣಸೇಮಕ್ಕಿ ಲಕ್ಷö್ಮಣ್, ಮರ್ಲೆ ಅಣ್ಣಯ್ಯ, ಬಿಳೇಕಲ್ಲು ಬಾಲಕೃಷ್ಣ, ರುದ್ರಯ್ಯ, ಸುರೇಶ್ ಮತ್ತಿತರರಿದ್ದರು.