ಜನರಲ್ಲಿ ಮಾನಸಿಕ ಅಸ್ಪಶ್ಯತೆ ದೂರವಾಗಿಲ್ಲ : ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

Published on

ಮೈಸೂರು: ಅಸ್ಪಶ್ಯತೆ ನಿವಾರಣೆಗೆ ಸರ್ಕಾರ ಕಾಯ್ದೆಗಳನ್ನು ಜಾರಿಗೆ ತಂದ ಪರಿಣಾಮ ಅಸ್ಪಶ್ಯತೆ ಪ್ರಮಾಣ ಕಡಿಮೆಯಾದರೂ ಜನರ ಮನದಲ್ಲಿ ರುವ ಮಾನಸಿಕ ಅಸ್ಪಶ್ಯತೆ ಹೋಗಲಾಡಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಭಾನುವಾರ ‘ಅಸ್ಪಶ್ಯತೆ ಅಳಿಯಲಿ, ಮನುಷ್ಯತ್ವ ಉಳಿಯಲಿ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಅಸ್ಪಶ್ಯತೆ ಆಚರಣೆ ನಿಷೇಧ ಕಾಯ್ದೆಯಿಂದ ಶೋಷಿತ ಸಮುದಾಯದ ಅನುಭವಿಸುತ್ತಿದ್ದ ನೋವು ಸಾಕಷ್ಟು ಪ್ರಮಾಣದಲ್ಲಿ ನಿವಾರಣೆಯಾಗಿದೆ. ಕಾಯ್ದೆಯ ಭಯದಿಂದ ಮೇಲ್ವರ್ಗದವರು ಅಸ್ಪಶ್ಯರನ್ನು ಹತ್ತಿರಕ್ಕೆ ಬಿಟ್ಟುಕೊಂ ಡರೂ ಅವರ ಮನದೊಳಗಿರುವ ‘ಮಾನಸಿಕ ಅಸ್ಪಶ್ಯತೆ’ಯನ್ನು ಕಾಯ್ದೆ ಮೂಲಕ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದಸಂಸ ರಾಜ್ಯ ಸಂಘಟನಾ ಸಂಯೋಜಕ ದೇವಗಳ್ಳಿ ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ದಸಂಸ ರಾಜ್ಯ ಸ್ಥಾಪಕ ಸಂಯೋಜಕ ವಿ.ನಾಗರಾಜು, ರಾಜ್ಯ ಸಮಿತಿ ಸದಸ್ಯ ಮುನಿರಾಜು, ಹಾಸನ ಜಿಲ್ಲಾ ಸಂಯೋಜಕ ರಾಜಶೇಖರ್, ಚಿಂತಕ ತುಕಾರಾಂ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net