ವಿಶ್ವಕ್ಕೆ ವಚನ ಸಾಹಿತ್ಯ ಪರಿಚಯಿಸಿದ ಡಿಎಸ್‌ಪಿ ಯಲಗಾರ

mm 24-5
ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ ಹಿನ್ನೆಲೆಯಲ್ಲಿ ಡಿಎಸ್‌ಪಿ ಬಸವರಾಜ ಯಲಗಾರ ಅವರನ್ನು ವಿಜಯಪುರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಸಿಂಪೀರ ವಾಲಿಕಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಬಿ.ಎಂ. ಅಜೂರ ಇತರರಿದ್ದರು.
Published on

ವಿಜಯಪುರ: ಡಿಎಸ್‌ಪಿ ಬಸವರಾಜ ಯಲಗಾರ ಅವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಭಾಷಾಂತರಿಸಿ ನಾಡಿನ ಕೀರ್ತಿ ಹಾಗೂ ಘನತೆ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ ಎಂದು ಕಸಾಪ ಸಂಘಟನಾ ಕಾರ್ಯದರ್ಶಿ ಮಹಮ್ಮದಗೌಸ್ ಹವಾಲ್ದಾರ್ ಹೇಳಿದರು.

ನಗರದ ಡಿಎಸ್‌ಪಿ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಹಾಗೂ ವಚನ ಸಾಹಿತ್ಯ ಸಂಸ್ಕೃತಿ ವೇದಿಕೆ ಪದಾಧಿಕಾರಿಗಳ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವರಾಜ ಯಲಗಾರ ಅವರನ್ನು ಗೌರವಿಸಿ ಅವರು ಮಾತನಾಡಿದರು.

ಇಂಗ್ಲಿಷ್ ಮಾಧ್ಯಮದಲ್ಲಿ ವಚನ ಸಾಹಿತ್ಯವನ್ನು ವಿಶ್ವಕ್ಕೆಲ್ಲ ಪರಿಚಯಿಸಿದ ಕೀರ್ತಿ ಬಸವರಾಜ ಯಲಗಾರ ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿ, ಜಗತ್ತಿನ ಎಲ್ಲ ರಾಷ್ಟ್ರಗಳು ಬಸವಣ್ಣನವರ ವಚನಗಳನ್ನು ಸ್ವೀಕರಿಸುತ್ತಿದ್ದಾರೆ. ಇಂತಹ ಅಪರೂಪದ ಸಂದರ್ಭ ಮೈ ಮೀ ಇಸ್ ದೇ ಎಂಬ ವಚನಗಳ ಭಾಷಾಂತರಿಸುವ ಮೂಲಕ ಬಸವಣ್ಣನವರ ವಚನ ಸಾಹಿತ್ಯ ವಿಶ್ವಕ್ಕೆ ಪರಿಚಯಿಸುತ್ತಿರುವುದು ನಾಡಿನ ಬಸವಾದಿ ಅನುಯಾಯಿಗಳು ಅತ್ಯಂತ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ವಚನ ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷ ವಿ.ಎಸ್. ಖಾಡೆ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಸಂಗಮೇಶ ಮೇತ್ರಿ, ವಿಜಯಲಕ್ಷ್ಮಿ ಹಳಕಟ್ಟಿ, ಎಸ್.ಎಂ. ಕಣಬೂರ, ಎನ್.ಆರ್. ಕುಲಕರ್ಣಿ, ಆಶಾ ಬಿರಾದಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಬಿ.ಎಂ. ಅಜೂರ, ಮಮತಾ ಮುಳಸಾವಳಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net