

ಲಿಂಗದಹಳ್ಳಿ: ಕಳೆದ ವರ್ಷ ಸಕಾಲಕ್ಕೆ ಮಳೆಯಾಗದಿರುವುದು ಹಾಗೂ ಈ ಬಾರಿ ಈವರೆಗೂ ಮಳೆಯಾಗದಿರುವುದರಿಂದ ಕಲ್ಲತ್ತಿಗಿರಿಯಲ್ಲಿರುವ ಕಲ್ಲತ್ತಿ ಜಲಪಾತ ನೀರಿಲ್ಲದೇ ಸಂಪೂರ್ಣ ಬತ್ತಿಹೋಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಭಕ್ತಾಧಿಗಳಿಗೆ ಕೇವಲ ಬಂಡೆಯ ದರ್ಶನದಿಂದ ನಿರಾಶೆಯುಂಟಾಗುತ್ತಿದೆ. ಸುಗ್ಗಿ ಸಮಯದ ನಂತರ ರಾಜ್ಯ ವಿವಿಧ ಭಾಗಗಳಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ದೇವರುಗಳಿಗೂ ನೀರಿನ ಸಮಸ್ಯೆ ಕಾಡಿದ್ದು, ದೇವರ ಮೂರ್ತಿಗಳನ್ನು ಸ್ವಚ್ಚ ಮಾಡಲು ನೀರಿಲ್ಲದಂತಾಗಿದೆ.