ಸಬ್​ ಇನ್​ಸ್ಪೆಕ್ಟರ್ ಮದ್ಯದ ಅಮಲಿನಲ್ಲಿ ಚಲಾಯಿಸುತ್ತಿದ್ದ ಪೊಲೀಸ್ ವಾಹನ ಅಪಘಾತ!

Police
Published on

ನೆಲಮಂಗಲ: ಸಾರ್ವಜನಿಕರು ಮದ್ಯಪಾನ ಮಾಡಿಕೊಂಡು ವಾಹನ ಚಲಾಯಿಸಿದರೆ ತಡೆದು ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರೇ ಪಾನಮತ್ತರಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಪ್ರಕರಣವೊಂದು ನಡೆದಿದೆ.

ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಾಜಗೋಪಾಲನಗರ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಸಂಜೀವಯ್ಯ (58) ಮದ್ಯ ಸೇವಿಸಿ ಅಪಘಾತ ಎಸಗಿದ ಪೊಲೀಸ್.

ಪೊಲೀಸ್ ಇಲಾಖೆಗೆ ಸೇರಿದ್ದ ಬೊಲೆರೊ ವಾಹನವನ್ನು ಈ ಎಸ್​ಐ ಮದ್ಯದ ಅಮಲಿನಲ್ಲಿ ಚಲಾಯಿಸಿದ್ದು, ನಿಯಂತ್ರಣ ತಪ್ಪಿದ ವಾಹನ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಳಿಕ ಇನ್ನೋವಾ ಕಾರಿಗೂ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ವಾಹನಗಳು ಜಖಂಗೊಂಡಿವೆ.

ಪೊಲೀಸ್ ವಾಹನದಲ್ಲಿ ಮದ್ಯದ ಬಾಟಲಿ ಹಾಗೂ ಬಾಡೂಟವಿದ್ದು, ಸಂಜೀವಯ್ಯ ತಲೆಗೂ ಗಾಯವಾಗಿದೆ. ಅದರೆ ಅಪಘಾತದ ಬಳಿಕ ಅವರು ಪರಾರಿಯಾಗಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net