ಕುಡಿದ ಮತ್ತಿನಲ್ಲಿ ಅಪ್ಪನಿಂದ ಮಗನ ಕೊಲೆ

Pickaxe
Published on

ಮೂಡಿಗೆರೆ: ನಂದೀಪುರ ಗ್ರಾಮದ ಇಂದಿರಾನಗರದಲ್ಲಿ ಗೋಪಾಲ ಗೌಡ ಎಂಬಾತ ಕುಡಿದ ಮತ್ತಿನಲ್ಲಿ ಮಗ ಪ್ರಸನ್ನ(38)ನಿಗೆ ಮಣ್ಣು ಅಗೆಯುವ ಪಿಕಾಸಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಕೊಲೆಯಾದ ಪ್ರಸನ್ನನಿಗೆ ಮದುವೆಯಾಗಿದ್ದು, ಇಬ್ಬರು ಪುತ್ರಿಯರು ಇದ್ದಾರೆ. ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದರಿಂದ ಆಕೆ ಆಲ್ದೂರು ಸಮೀಪದ ಗಾಳಿಗಂಡಿ ಎಂಬಲ್ಲಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅಪ್ಪ ಗೋಪಾಲಗೌಡ ಮತ್ತು ಮಗ ಪ್ರಸನ್ನ ಇಬ್ಬರೂ ಇಂದಿರಾನಗರದ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ರಾತ್ರಿ ಕುಡಿದ ಮತ್ತಿನಲ್ಲಿ ಅಪ್ಪ ಮತ್ತು ಮಗ ಜಗಳವಾಡಿಕೊಂಡಿದ್ದು ಅಪ್ಪ ಪಿಕಾಸಿಯಿಂದ ಮಗನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಪ್ರಸನ್ನ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೊಲೀಸರು ಆರೋಪಿ ಗೋಪಾಲ ಗೌಡನನ್ನು ರಾತ್ರಿಯೇ ಬಂಧಿಸಿದ್ದಾರೆ. ಪ್ರಸನ್ನನ ಪತ್ನಿ ಇಂಪಾ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net