

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮುರಗಮಲೆ ಗ್ರಾಮದಲ್ಲಿ ಮನೆಯ ಕಾಂಪೌಂಡ್‌ನಲ್ಲಿ ಅಕ್ರಮವಾಗಿ ಬೆಳೆಸಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕಿ ಪ್ರಮೀಳಮ್ಮ (55) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗ ರಸ್ತೆಯಯಲ್ಲಿ ಮನೆಯ ಕಾಂಪೌಂಡ್‌ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೆಂಚರ‍್ಲಹಳ್ಳಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪುರುಷೋತ್ತಮ್, ಪಿಎಸ್‌ಐ ಶಿವಕುಮಾರ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು. ಇದೇ ವೇಳೆ 66 ಸಾವಿರ ರೂ ಬೆಲೆ ಬಾಳುವ ಗಾಂಜಾ ಗಿಡಗಳು ಸಿಕ್ಕಿವೆ.
ಮುರಗಮಲ್ಲಾದಲ್ಲಿ ಊದುಬತ್ತಿ ತಯಾರಿಕೆ ಕೆಲಸ ಕೈಗೊಳ್ಳುತ್ತಿರುವ ಪ್ರಮೀಳಮ್ಮ ವಾಸದ ಮನೆಯ ಮುಂಭಾಗ ಕಾಂಪೌಂಡಿನ ಖಾಲಿ ಸ್ಥಳದಲ್ಲಿ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದರು. ಯಾರಿಗೂ ತಿಳಿಯದಂತೆ ಮರೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಪೊಲೀಸರು ತಿಳಿಸಿದ್ದಾರೆ.