34 ಸಾವಿರ ರೂ. ಮೌಲ್ಯದ ಮಾದಕ ವಸ್ತು ಪತ್ತೆ

drugg
Published on


ಮಂಗಳೂರು: ನಗರದ ಹೊರ ವಲಯದ ಅಂಬ್ಲಮೊಗರು ಗ್ರಾಮದ ಎಲ್ಯಾರು ಪದವು ಪ್ರಾಥಮಿಕ ಆರೋಗ್ಯದ ಕೇಂದ್ರದ ಹಿಂಬದಿ ಮಾರಾಟ ಮಾಡುತ್ತಿದ್ದ 34 ಸಾವಿರ ರೂ. ಮೌಲ್ಯದ 17 ಗ್ರಾಂ ತೂಕದ ಮಾದಕವಸ್ತು ವೈಟ್ ಮೆಥಾಎಂಪೆಟಾಮೈನ್‌ನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿ ಅಮೀರ್ ಎಂಬಾತ ತಪ್ಪಿಸಿಕೊಂಡಿದ್ದು, ಸದಕತ್ ಎಂಬಾತನನ್ನು ಬಂಧಿಸಲಾಗಿದೆ. ಈತ ಬಳಿಯಿಂದ ಮಾದಕ ವಸ್ತು, ಕಪ್ಪು ಪ್ಲಾಸ್ಟಿಕ್ ಕವರ್, 1 ಮೊಬೈಲ್, ತೂಕ ಮಾಪನ ಹಾಗೂ 2 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರಗೆ ಪೊಲೀಸರು ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net