ಡ್ರಗ್ಸ್ ಮಾರಾಟ ಪ್ರಮುಖ ಆರೋಪಿಗಳ ಬಂಧನ

Drugs accused
Published on

ಮಂಗಳೂರು: ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ನೈಜೀರಿಯಾ ಪ್ರಜೆ ಸ್ಟ್ಯಾನ್ಲಿ ಚಿಮಾ ಮತ್ತು ಕಾಸರಗೋಡು ಜಿಲ್ಲೆ ಉಪ್ಪಳ ನಿವಾಸಿ ರಮೀಜ್ ಎಂಬುವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 170 ಗ್ರಾಂ ಮತ್ತು 65 ಗ್ರಾಂ ತೂಕದ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ವಶಪಡಿಸಿ, ಐವರನ್ನು ಬಂಧಿಸಲಾಗಿದ್ದು, 2 ಕಾರು, 9 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿತ್ತು. ಈ ವಸ್ತುಗಳ ಒಟ್ಟು ಮೌಲ್ಯ 24.82 ಲಕ್ಷ ರೂ. ಬಂಧಿತರಾಗಿರುವವರು ನೀಡಿದ ಮಾಹಿತಿಯಂತೆ ಬೆಂಗಳೂರಿಗೆ ತೆರಳಿದ ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆ ಮೂಲಕ ಬೃಹತ್ ಡ್ರಗ್ಸ್ ಜಾಲ ಭೇದಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಮತ್ತು ಪಿಎಸ್‌ಐ ಶರಣಪ್ಪ ಭಂಡಾರಿ, ಮಲ್ಲಿಕಾರ್ಜುನ್ ಬಿರಾದಾರ, ಎಎಸ್‌ಐ ಮೋಹನ್, ಸಿಬ್ಬಂದಿ ರೆಜಿ ಇಕ್ಬಾಲ್, ಅಶೋಕ್, ನಾಗರಾಜ ಲಮಾಣಿ, ಪುರುಷೋತ್ತಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net