ಮಾದಕವಸ್ತು ಎಂಡಿಎಂಎ ಮಾರಾಟ ಮೂವರ ಬಂಧನ

drugs
Published on

ಮಂಗಳೂರು: ನಗರದ ಜೆಪ್ಪು ಕಿಂಗ್ಸ್ ಗಾರ್ಡನ್ ಬಳಿಯ ಜೆಪ್ಪು ಮಜಿಲ ರಸ್ತೆ ಬದಿಯಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಪಾಂಡೇಶ್ವರ ಪೊಲೀಸರು ಬಂಸಿದ್ದಾರೆ.


ತಲಪಾಡಿ ಗುಡ್ಡೆ ಹೌಸ್ ಅಬ್ದುಲ್ ರವ್ೂ (29), ತಲಶ್ಶೇರಿ ನಿವಾಸಿ ಅಬ್ದುಲ್ ಗೂರ್ (21), ಚಿಕ್ಕಮಗಳೂರು ಮಾವಿನಕೆರೆ ನಿವಾಸಿ ಮೊಹಮ್ಮದ್ ಇರ್ಷಾದ್ (21) ಬಂತ ಆರೋಪಿಗಳು.


ಆ.18ರಂದು ಮಜಿಲ ರಸ್ತೆ ಬದಿಯಲ್ಲಿ ಮಾದಕ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಹಿನ್ನಲೆಯಲ್ಲಿ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ 13,750 ರೂ. ಮೌಲ್ಯದ 5.071ಗ್ರಾಂ ಎಂಡಿಎಂಎ, ನಗದು 5100 ರೂ., ತೂಕಮಾಪನ, ಮೊಬೈಲ್ ೆನ್, 2 ದ್ವಿಚಕ್ರ ವಾಹನ ಸೇರಿದಂತೆ 1,77,750ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net