ಮಾದಕ ದ್ರವ್ಯಗಳ ಸೇವನೆ ಅಪಾಯ

DRUGS AWAIRNES
Published on

ನರೇಗಲ್ಲ: ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ನರೆಗಲ್ಲ ಠಾಣೆಯ ಪಿಎಸ್‌ಐ ನಿಖಿಲ್ ಎಂ. ಕೆ. ಹೇಳಿದರು.

ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ಸ್ಥಳೀಯ ಪೊಲೀಸ್ ಠಾಣೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಾದಕ ದ್ರವ್ಯ ಸೇವನೆ ಬಳಕೆ ಹಾಗೂ ಮಾರಾಟ ತಡೆಗಟ್ಟುವ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೀರ್ಘಕಾಲದ ಡ್ರಗ್ ಸೇವನೆಯು ಮಿದುಳಿನ ಕಾರ್ಯಕ್ಷಮತೆಗೆ ಧಕ್ಕೆ ಉಂಟು ಮಾಡುತ್ತದೆ. ಇದರಿಂದ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ. ವ್ಯಕ್ತಿಯು ಒಮ್ಮೆ ಚಟಕ್ಕೆ ಅಂಟಿಕೊಂಡರೆ ಸುಲಭವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುವ ವ್ಯಸನವು ಪ್ರಾಣಕ್ಕೂ ಸಂಚಕಾರಿಯಾಗಿದೆ ಎಂದರು.

ಪ್ರಾಚಾರ್ಯ ಈ. ಆರ್. ಲಗಳೂರ, ಎಸ್. ಎಲ್. ಗುಳೆದಗುಡ್ಡ, ಕೆ.ಆರ್. ಪಾಟೀಲ, ಜ್ಯೋತಿ ಬೋಳಣ್ಣವರ, ಅಂಜನಮೂರ್ತಿ ಕೆ. ಎಚ್, ಸಜೀಲಾ, ಸುನಂದಾ ಮುಂಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net