

ಬೆಂಗಳೂರು: ಮಕ್ಕಳ ಆಟಿಕೆಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ವಿಮಾನದಲ್ಲಿ ಅಮೆರಿಕಾಗೆ ಕಳುಹಿಸಿದ್ದ ಪಾರ್ಸೆಲ್‌ನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ(ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕೋರಿಯರ್‌ನಲ್ಲಿ ಗಾಂಜಾ ಸಾಗಾಟದ ಕುರಿತು ಖಚಿತ ಮಾಹಿತಿ ಪಡೆದ ಕೆಐಎ ಕಸ್ಟಮ್ಸ್ ಅಧಿಕಾರಿಗಳು, ಪಾರ್ಸೆಲ್‌ಗಳನ್ನು ಸ್ಕ್ಯಾನಿಂಗ್ ಯಂತ್ರದಲ್ಲಿ ತಪಾಸಣೆಗೆ ಒಳಪಡಿಸಿದ್ದರು.
ಈ ವೇಳೆ ಮಕ್ಕಳ ಆಟಿಕೆಯಲ್ಲಿ 3.68 ಲಕ್ಷ ರೂ. ಮೌಲ್ಯದ 230 ಗ್ರಾಂ ಗಾಂಜಾ ಪತ್ತೆಯಾಗಿದೆ. ಸುಳ್ಳು ವಿಳಾಸ ನೀಡಿ ಅಮೆರಿಕಾಗೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪಾರ್ಸೆಲ್ ವಾರಸುದಾರರು ಯಾರೆಂದು ತನಿಖೆ ಮುಂದುವರಿಸಲಾಗಿದೆ ಎಂದು ಕೆಐಎ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.