

ಹನುಮಸಾಗರ: ಮಾನಸಿಕ ಹಾಗೂ ದೈಹಿಕವಾಗಿ ಅನೇಕ ತೊಂದರೆಗಳನ್ನು ಉಂಟು ಮಾಡುವ ಮಾದಕ ವಸ್ತುಗಳ ಸೇವನೆಯಿಂದ ಯುವ ಸಮೂಹ ದೂರವಿರಬೇಕೆಂದು ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು ಹೇಳಿದರು.
ಪಟ್ಟಣದ ಹಳೆಯ ಬಸ್ ನಿಲ್ದಾಣದ ಹತ್ತಿರ ಬಿಜೆಪಿ ಯುವ ಮೋರ್ಚಾ ಹಾಗೂ ಜನಜಾಗೃತಿ ತಂಡ ಕುಷ್ಟಗಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾದಕ ವಸ್ತು ಸೇವನೆ ತೆರೆಮರೆಯಲ್ಲಿ ನಡೆಯುತ್ತದೆ. ಯುವಕರು ಇದರ ಜಾಲಕ್ಕೆ ಬೀಳಬಾರದು ಎಂದರು.
ಬಿಜೆಪಿ ಯುವ ಮೋರ್ಚಾ ತಾಲೂಕಾ ಉಪಾಧ್ಯಕ್ಷ ವಿಜಯಕುಮಾರ ಕುಷ್ಟಗಿ, ಮುಖಂಡ ಹನುಮಂತಪ್ಪ ಬಿಂಗಿ, ಕಲಾವಿದರಾದ ಶರಣಪ್ಪ ವಡಿಗೇರಿ. ಸುಖಮುನಿ ಗಡಗಿ, ಸುಧಾ ಮುತ್ತಾಳ, ಶಿವು ಹೊಸಳ್ಳಿ, ದೇವು ಕ್ಯಾದಿಗುಪ್ಪ, ವೀರಯ್ಯ ಹಿರೇಮಠ, ಗಿರಿಜಮ್ಮ ಸೂಡಿ, ಗೌರಮ್ಮ ಕುಷ್ಟಗಿ, ಶಿವಣ್ಣ ಪೂಜಾರ ಇತರರಿದ್ದರು.