

ಮಂಗಳೂರು: ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಕೊಲ್ಲಂ ಮನಿಹಾರ್ ನಿವಾಸಿ ಅಲೀನ್ (20) ಮತ್ತು ಕುಳಾಯಿ ವಿದ್ಯಾನಗರ ನಿವಾಸಿ ಧನುಷ್ (28) ಬಂಧಿತರು.
ಸೆ.1ರಂದು ರಾತ್ರಿ 11.15ರ ವೇಳೆಗೆ ಬಿಜೈ ಕಾಪಿಕಾಡ್ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮನಿಹಾರ್ ಅನುಮಾನಾಸ್ಪದವಾಗಿ ನಿಂತಿದ್ದು, ಆತನನ್ನು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಆತನು ತಾನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಪ್ಪೊಪಿಕೊಂಡಿದ್ದಾನೆ. ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.
ಅದೇ ದಿನ ರಾತ್ರಿ 11-30 ವೇಳೆಗೆ ಆನೆಗುಂಡಿ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದ ಧನುಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತನು ತಾನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಪ್ಪೊಪಿಕೊಂಡಿದ್ದು, ಬಳಿಕ ವೈದ್ಯಕೀಯ ಪರೀಕ್ಷೆಯಲ್ಲೂ ದೃಢಪಟ್ಟಿದೆ.
ಎರಡೂ ಪ್ರಕರಣಗಳು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.