ರೈಲಿನಲ್ಲಿ ಸಾಗಿಸುತ್ತಿದ್ದ ಮಾದಕ ವಸ್ತುಗಳು ವಶಕ್ಕೆ

kdr 7
Published on

ಕಡೂರು: ಟಾಟಾ ನಗರದಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ರೈಲ್ವೇ ಪೊಲೀಸರ ಸಹಕಾರದಿಂದ ತಪಾಸಣೆ ನಡೆಸಿದ ಕಡೂರು ಅಬಕಾರಿ ಅಧಿಕಾರಿಗಳು ಸುಮಾರು 2.17 ಲಕ್ಷ ಮೌಲ್ಯದ ಮಾದಕ ಪದಾರ್ಥಗಳನ್ನು ಕಡೂರು ರೈಲ್ವೆ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಚಿಕ್ಕಜಾಜೂರಿನಿಂದಲೂ ತಪಾಸಣೆ ಮಾಡಿಕೊಂಡು ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮಾನಾಸ್ಪದ ಚೀಲದಲ್ಲಿ ಒಂದೂವರೆ ಕಿಲೋ ಒಣ ಗಾಂಜಾ, 25ಗ್ರಾಂ ಎಂಡಿಎಂಎ ಮತ್ತು 37 ಭಾಂಗ್ ಚಾಕೊಲೇಟ್‌ಗಳು ದೊರೆತಿವೆ. ಚೀಲದ ವಾರಸುದಾರರು ಪತ್ತೆಯಾಗಿಲ್ಲ ಎಂದು ಕಡೂರು ಅಬಕಾರಿ ನಿರೀಕ್ಷಕ ಎಲ್.ಸಿ.ಸಂದೀಪ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ತನಿಖೆಯಲ್ಲಿ ಅಬಕಾರಿ ಉಪನಿರೀಕ್ಷಕ ನಾಗೇಂದ್ರ, ಅಬಕಾರಿ ಸಿಬ್ಬಂದಿ ಉಮೇಶ್, ಈರಪ್ಪ, ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net