

ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ 528 ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಘಟಕಗಳನ್ನು ತೆರೆಯಲಾಗಿದೆ. ಅತ್ಯಂತ ಗೌಪ್ಯವಾಗಿ ಕಾರ್ಯಾಚರಿಸುವ ಈ ಘಟಕಗಳಿಗೆ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ಡ್ರಗ್ಸ್ ಪೂರೈಕೆ, ಸೇವನೆ ಕುರಿತು ಮಾಹಿತಿ ನೀಡಿ ತಮ್ಮ ಸಹಪಾಠಿಗಳು, ಸ್ನೇಹಿತರು ತಪ್ಪು ದಾರಿಗೆ ಇಳಿಯುವುದನ್ನು ತಪ್ಪಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೋರಿದರು.
.