ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಡ್ರಗ್​ ಪೆಡ್ಲರ್ ಬಂಧನ

drugs
Published on

ಬೆಂಗಳೂರು: ರಾಜಧಾನಿಯ ಪೊಲೀಸರ ಭರ್ಜರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್​ ಡ್ರಗ್​ ಡೀಲ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್​ ಸಿಕ್ಕಂತಾಗಿದೆ. ಬೆಂಗಳೂರಿನಲ್ಲಿ ಬಹುದೊಡ್ಡ ಡ್ರಗ್​ ನೆಟ್​ವರ್ಕ್​ ಹೊಂದಿರುವ ಕುಖ್ಯಾತ ಡ್ರಗ್​ ಪೆಡ್ಲರ್ ವಿಟಿ ಎಂದೇ ಕರೆಸಿಕೊಳ್ಳುತ್ತಿರುವ ನೈಜೀರಿಯಾ ಮೂಲದ ಚಿಕ್ವಾಡ್ ವಿನ್ಸೆಂಟ್ ಹಾಗೂ ಎಮೆಕಾ ಚಿನೆಡೋ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಸ್​​ಪೋರ್ಟ್​ ಇಲ್ಲದೆ ಅಕ್ರಮವಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ ವಿಟಿ ಏಳು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಸ್ಯಾಂಡಲ್​ವುಡ್​ ಡ್ರಗ್ ಕೇಸ್​ನಲ್ಲಿ ಬಂಧಿತರಾಗಿರುವ ಪೆಡ್ಲರ್​ಗಳ ಜತೆಗೂ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್, ಮೆಡಿಕಲ್, ಬಿಜಿನೆಸ್ ಕಾಲೇಜುಗಳೇ ಇವನ ಡ್ರಗ್ ಡೀಲ್ ಅಡ್ಡಗಳಾಗಿದ್ದು, ರಾಜಕಾರಣಿಗಳ ಮಕ್ಕಳು, ಸಿನಿಮಾ ನಟ-ನಟಿಯರು, ಕಾಲೇಜು ವಿದ್ಯಾರ್ಥಿಗಳೇ ಇವನ ಟಾರ್ಗೆಟ್​ ಆಗಿದ್ದರು.

ಸದ್ಯ ಬಂಧಿತ ಡ್ರಗ್ ಪೆಡ್ಲರ್ಸ್​ ಲೂಮ್ ಪೆಪ್ಪರ್ ಮತ್ತು ಪ್ರತೀಕ್ ಶೆಟ್ಟಿ ಜತೆ ಲಿಂಕ್ ಹೊಂದಿದ್ದ ವಿಟಿ, ಮನೆಯಲ್ಲೇ ಡ್ರಗ್ಸ್ ತೂಕ ಮಾಡಿ ಪ್ಯಾಕಿಂಗ್ ಮಾಡಿಸಿ, ನೆಟ್ ವರ್ಕ್ ಗ್ಯಾಂಗ್ ಮೂಲಕ ಸಪ್ಲೈ ಮಾಡುತ್ತಿದ್ದ.

ಬಂಧಿತರಿಂದ 300 ಗ್ರಾಂ ಗಾಂಜಾ ಎಂಡಿಎಂಎ ಮತ್ತು ಇತರ ಕೆಮಿಕಲ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬ್ಯಾಗ್​ನಲ್ಲಿ ಡ್ರಗ್ಸ್ ಇಟ್ಟುಕೊಂಡು ರಸ್ತೆಯಲ್ಲಿ ಮಾರುತ್ತಿದ್ದ ಈ ಆರೋಪಿಗಳ ವಿರುದ್ಧ ಕಾಡುಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net