ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ವಿಶೇಷ ಅಭಿಯಾನ

12GDG06
Published on

ಗದಗ: ಜಿಲ್ಲಾ ಪೋಲಿಸ್ ಇಲಾಖೆಯ ಗದಗ ಶಹರ ಪೋಲಿಸ ಠಾಣೆ ವತಿಯಿಂದ ನಗರದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಶಾಲಾ-ಕಾಲೇಜು ವಿಧ್ಯಾರ್ಥಿಗಳೊಂದಿಗೆ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜನ ಜಾಗೃತಿ ಜಾಥಾ ಹಳೆ ಬಸ ನಿಲ್ದಾಣ, ಶಹರ ಪೋಲಿಸ ಠಾಣೆ ವ್ಯಾಪ್ತಿಯ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಸಂಚರಿಸಿತು. ಈ ಜಾಥಾದಲ್ಲಿ ನಗರದ ಆಂಗ್ಲೋ ಉರ್ದು ಶಾಲೆ ಮಕ್ಕಳ ಪಾಲ್ಗೊಂಡಿದ್ದರು. ಜನ ಜಾಗೃತಿ ಜಾಥಾದಲ್ಲಿ ಮಕ್ಕಳು ಮಾದಕ ದ್ರವ್ಯ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಗದಗ ಶಹರ ಪೋಲಿಸ್ ಠಾಣೆಯ ಇನ್ಸಪೆಕ್ಟರ ಸಿ.ಬಿ.ಪಾಟೀಲ, ಪಿ.ಎಸ್.ಆಯ್ ಗಳಾದ  ಆರ್.ಆರ್.ಮುಂಡವಾಡಗಿ, ಭಾರತಿ ಬಂಕಾಪುರ, ಎಚ್.ಕೆ.ಪಾಟೀಲ ಸೇರಿದಂತೆ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net