ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಮಾದಕ ವಸ್ತು ಮಾರಾಟಗಾರರ ಮಾಹಿತಿ ನೀಡಿ

QR Code scane
Published on

ಕಾರವಾರ: ಇತ್ತೀಚಿನ ದಿನಗಳಲ್ಲಿ ಯುವ ಜನತೆಯನ್ನು ಮತ್ತು ಪೋಷಕರನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ ಮಾದಕ ವಸ್ತು.. ಯುವ ಜನತೆ

ಹೆಚ್ಚಿನ ಸಂಖ್ಯೆಯಲ್ಲಿ ಇವುಗಳ ದಾಸ್ಯಕ್ಕೆ ಒಳಗಾಗುವ ಮೂಲಕ ಅಪರಾಧ ಚಟುವಟಿಕೆಗಳಲ್ಲಿ ಕೂಡಾ ಭಾಗವಹಿಸಿ ತಮ್ಮ ಭವಿಷ್ಯವನ್ನು ಹಾಳು

ಮಾಡಿಕೊಳ್ಳುತ್ತಿದ್ದು, ಈ ಪಿಡುಗು ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಇಲಾಖೆಯ ಈ

ಕಾರ್ಯಕ್ಕೆ ಸಾರ್ವಜನಿಕರ ಬೆಂಬಲವೂ ಅಗತ್ಯವಾಗಿದ್ದು, ಸಾರ್ವಜನಿಕರು ಕ್ಯೂರ್ ಕೋಡ್ ಸ್ಕ್ಯಾನ್‌ ಮಾಡುವ ಮೂಲಕ ಅತ್ಯಂತ ಸುಲಭವಾಗಿ ಮಾದಕ

ವಸ್ತು ಮಾರಾಟ ಮತ್ತು ಬಳಕೆದಾರರ ಬಗ್ಗೆ ಮಾಹಿತಿ ನೀಡಬಹುದು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಹಂಚಿಕೆ ಮತ್ತು ಬಳಕೆ ಕುರಿತು ಅತ್ಯಂತ

ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಪ್ರಮುಖ ಸಾರ್ವಜನಿಕ ಸ್ಥಳ

ಮತ್ತು ಪ್ರವಾಸಿ ತಾಣಗಳಲ್ಲಿ ಕ್ಯೂಆರ್ ಕೋಡ್ ಇರುವ ಸ್ಟಿಕರ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಿ ಸಾರ್ವಜನಿಕರು

ಮಾದಕ ವಸ್ತುಗಳ ಸೇವನೆ ಮಾಡುವವರ ಅಥವಾ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಬಹುದಾಗಿದೆ.

ಈ ಕ್ಯೂರ್ ಕೋಡ್ ಸ್ಕ್ಯಾನ್‌ ಮಾಡಿದ ಕೂಡಲೇ ಪೊಲೀಸ್ ಇಲಾಖೆಯ ವಾಟ್ಸಾಪ್ ಸಂಖ್ಯೆ ತೆರೆದುಕೊಳ್ಳಲಿದ್ದು, ಸಾರ್ವಜನಿಕರು ತಮಗೆ

ಕಂಡು ಬರುವ ಮಾದಕ ವಸ್ತು ಸೇವನೆ ಮಾಡುವವರು, ಹಂಚಿಕೆ ಮಾಡುವವರು, ಸಾಗಾಟ ಮಾಡುವವರ ಮಾಹಿತಿಯನ್ನು ಇದರಲ್ಲಿ

ಹಂಚಿಕೊಳ್ಳಬಹುದಾಗಿದೆ. ಅಲ್ಲದೇ ಇದಕ್ಕೆ ಪೂರಕವಾಗಿ ಆ ಸ್ಥಳದಲ್ಲಿನ ಪೋಟೋಗಳು ಮತ್ತು ವೀಡಿಯೋಗಳನ್ನು ಕೂಡಾ ಇದರಲ್ಲಿ ಶೇರ್

ಮಾಡಬಹುದಾಗಿದ್ದು, ಈ ಮಾಹಿತಿ ನೀಡುವ ಮಾಹಿತಿದಾರರ ವಿವರಗಳನ್ನು ಇಲಾಖೆ ವತಿಯಿಂದ ಅತ್ಯಂತ ಗೌಪ್ಯವಾಗಿಡಲಾಗುತ್ತದೆ.

ಈ ಕ್ಯೂರ್ ಕೋಡ್ ಸ್ಕ್ಯಾನ್‌ ಮೂಲಕ ಸಲ್ಲಿಕೆಯಾಗುವ ದೂರುಗಳ ಕುರಿತಂತೆ, ಆ ಪ್ರದೇಶಕ್ಕೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆಯ

ಸಿಬ್ಬಂದಿ ಅಥವಾ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 112 ವಾಹನದಲ್ಲಿನ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಲಿದ್ದು ಸಂಬAಧಪಟ್ಟವರ ವಿರುದ್ದ

ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯನ್ನು ಮಾದಕ ವಸ್ತುಗಳ ಬಳಕೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ

ಸಾರ್ವಜನಿಕ ಅರಿವು ಕಾರ್ಯಕ್ರಮಗಳ ಜೊತೆಗೆ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೆ

718 ಅರಿವು ಕಾರ್ಯಕ್ರಮಗಳುನ್ನು ಆಯೋಜಿಸಿದ್ದು, 369 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ 25000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಾಗೃತಿ

ಮೂಡಿಸಲಾಗಿದೆ. 294 ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 5500 ಕ್ಕೂ ಅಧಿಕ ಮಂದಿಯಿAದ 5 ಕಿಮೀ ನ ಮ್ಯಾರಾಥಾನ್

ಓಟ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 94 ಕೆ.ಜಿ ಯಷ್ಟು ಗಾಂಜಾವನ್ನು

ನಿಯಮಾನುಸಾರ ನಾಶಪಡಿಸಿದ್ದು, ಇದರ ಮೌಲ್ಯ 39.25 ಲಕ್ಷವಾಗಿದ್ದು, 2022 ರಿಂದ ಇದುವರೆಗೆ ಒಟ್ಟು 26 ಪ್ರಕರಣಗಳಲ್ಲಿ 43 ಆರೋಪಿತರಿಂದ

49.80 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮಾದಕವಸ್ತು ಸೇವನೆ ಮಾಡುತ್ತಿದ್ದ 126 ಪ್ರಕರಣಗಳಲ್ಲಿ 154 ಮಂದಿಯನ್ನು

ಬಂಧಿಸಲಾಗಿದೆ.

ಜಿಲ್ಲೆಯನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ.

ಕೋಡ್ ಸ್ಕಾö್ಯನ್ ಮಾಡಿ ಸಾರ್ವಜನಿಕರು ಮಾದಕ ವಸ್ತುಗಳ ಸೇವನೆ ಮಾಡುವವರ ಅಥವಾ ಮಾರಾಟ ಮಾಡುವವರ ಮಾಹಿತಿ ನೀಡಬಹುದಾಗಿದೆ.

ಪ್ರಮುಖ ಸಾರ್ವಜನಿಕ ಸ್ಥಳ ಮತ್ತು ಪ್ರವಾಸಿ ತಾಣಗಳಲ್ಲಿ ಪೊಲೀಸ್ ಇಲಾಖೆವತಿಯಿಂದ ಕ್ಯೂಆರ್ ಕೋಡ್ ಸ್ಟಿಕರ್ ಅಳವಡಿಸಲಾಗುತ್ತಿದೆ. ಈ ಕ್ಯೂಆರ್

ಮಂದಿಯಲ್ಲಿ 575 ಮಂದಿ 18 ರಿಂದ 30 ವರ್ಷದೊಳಗಿನ ಯುವ ಜನತೆ ಇದ್ದಾರೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ,

ಸ್ಥಳೀಯವಾಗಿ ಸರಬರಾಜು ಆಗುತ್ತಿದೆ. ಜಿಲ್ಲೆಯಲ್ಲಿ 2019 ರಿಂದ ಇದುವರೆಗೆ ವರದಿಯಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಒಟ್ಟು 783

ಜಿಲ್ಲೆಗೆ ಹೊರ ರಾಜ್ಯಗಳಿಂದ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, ಸ್ಥಳೀಯ ಪ್ಲೆಡ್ಲರ್‌ಗಳ ಮೂಲಕ ಪ್ರವಾಸಿಗರಿಗೆ ಮತ್ತು

ಉತ್ತರ ಕನ್ನಡ ಜಿಲ್ಲೆ

ದೀಪನ್ ಎಂ.ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net