

ವಿಜಯಪುರ : ಸಮಾಜದ ಸ್ವಾಸ್ಥ ಕಾಪಾಡಲು ವ್ಯಸನಗಳಿಂದ ಮುಕ್ತರಾಗುವುದು ಯುವ ಜನಾಂಗಕ್ಕೆ ಅಗತ್ಯವಾಗಿದೆ ಎಂದು ಪ್ರಾಚಾಯೆರ್ ಡಾ. ಆರ್.ಎಂ. ಮಿರ್ಧೆ ಹೇಳಿದರು.ನಗರದ ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಯುಕ್ತಾಶ್ರಯ ಮತ್ತು ಎನ್ಎಸ್ಎಸ್ ಟಕ ಒಂದು ಮತ್ತು ಎರಡರ ಸಂಯೋಜನೆಯಲ್ಲಿ ಬುಧವಾರ ಹಮ್ಮಿಕೊಂಡ ನಶೆ ಮುಕ್ತ ಭಾರತ&ಸೇ ನೋ ಟು ಡ್ರಗ್ಸ್ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಜನತೆ ದೇಶದ ಭವಿಷ್ಯದ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ನಶಾ ಪದಾರ್ಥಗಳಿಂದ ದೂರವಿದ್ದು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಅಲಹೆ ನೀಡಿದ ಅವರು, ವ್ಯಸನಗಳಿಂದಾಗುವ ದುಷ್ಪರಿಣಾಮದ ಕುರಿತು ಮಾಹಿತಿ ನೀಡಿದರು.ಯುವ ಜನತೆ ದುಷ್ಟಚಟಗಳಿಗೆ ದಾಸರಾಗುತ್ತಿದ್ದು, ಸಾಕಷ್ಟು ಕುಟುಂಬಗಳು ಅದಕ್ಕೆ ಬಲಿಯಾಗಿವೆ. ವ್ಯಸನಗಳಿಂದಾಗುವ ದುಷ್ಪರಿಣಾಮಗಳು ಆದರ್ಶ ಜೀವನಕ್ಕೆ ದೊಡ್ಡ ಮಾರಕವಾಗಿದ್ದು, ಅವುಗಳಿಂದ ದೂರವಿರಲು ಸಲಹೆ ನೀಡಿ, ವಿದ್ಯಾರ್ಥಿಗಳು ಸಾಮಾಜಿಕ ಪ್ರತಿೆ ತೆಗೆದುಕೊಳ್ಳುವುದರ ಮೂಲಕ ನಶಾ ಮುಕ್ತ ಭಾರತಕ್ಕೆ ಕೈ ಜೋಡಿಸಬೇಕು ಕರೆ ನೀಡಿದರು.
ಎನ್ಎಸ್ಎಸ್ ಅಧಿಕಾರಿ ಡಾ. ತರನ್ನುಮ್ ಜಬೀನಖಾನ ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತ ನಿರ್ಮಿಸಲು ಶಪಥ ತೆಗೆದುಕೊಳ್ಳೋಣ ಎಂದು ತಿಳಿಸುವ ಜತೆಗೆ ಪ್ರಮಾಣ ವಚನ ಬೋಧಿಸಿದರು.ಉಪ ಪ್ರಾಚಾರ್ಯ ಅನೀಲ ನಾಯಕ, ಎನ್ಎಸ್ಎಸ್ ಟಕದ ಅಧಿಕಾರಿ ಡಾ. ಮಿಲನ ರಾಠೋಡ, ಆರ್.ಜಿ. ಕಮತರ ಮತ್ತಿತರರಿದ್ದರು.
ವಿಜಯಪುರದ ಎಸ್ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ನಶೆ ಮುಕ್ತ ಭಾರತ&ಸೇ ನೋ ಟು ಡ್ರಗ್ಸ್ ಅಭಿಯಾನದಲ್ಲಿ ಡಾ. ಆರ್.ಎಂ. ಮಿರ್ಧೆ ಮಾತನಾಡಿದರು. ಅನೀಲ ನಾಯಕ, ಡಾ. ಮಿಲನ ರಾಠೋಡ ಮತ್ತಿತರರಿದ್ದಾರೆ.