

ಬೆಳಗಾವಿ: ಯುವ ಜನತೆ ತಂಬಾಕು, ಮದ್ಯೆ ಸೇವನೆ ಮತ್ತು ಮಾದಕ ವ್ಯಸನಗಳಿಂದ ದೂರುವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಹೇಳಿದರು.
ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ಎನ್‌ಎಸ್‌ಎಸ್ ಸೆಲ್, ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಗುರುವಾರ ನಗರದಲ್ಲಿ ನಶೆ ಮುಕ್ತ ಭಾರತ ಅಭಿಯಾನದಲ್ಲಿ ಅವರು ಮಾತನಾಡಿದರು.
ಸಿಸ್ಟರ್ ಬಿ.ಕೆ. ವಿದ್ಯಾ ಮಾದಕ ವ್ಯಸನ ಮತ್ತು ಅದರ ಪರಿಣಾಮಗಳ ಕುರಿತು ಕಿರುಚಿತ್ರ ಪ್ರದರ್ಶಿಸಿದರು. ಬಿ.ಕೆ. ಪಾರ್ವತಿ ಮಾದಕ ವ್ಯಸನ ಮತ್ತು ನಾಶ ಮುಕ್ತ ಭಾರತ ವಿರುದ್ಧ ಪ್ರತಿಜ್ಞೆ ಬೋಧಿಸಿದರು. ಕಾಹೆರ್‌ನ ನಾಶ ಮುಕ್ತ ಭಾರತ ಅಭಿಯಾನದ ಸಂಯೋಜಕಿ ಡಾ.ರವೀಂದ್ರ ಹೊನ್ನುಗರ ನಶೆಮುಕ್ತ ಕಾಹೇರ್ ಕ್ಯಾಂಪಸ್ ಬಗ್ಗೆ ವಿವರಿಸಿದರು. ಬಿ.ಕೆ. ಕಾಶಿನಾಥ, ಡಾ.ಸೀಮಾ ಮತ್ತು ಬಿ.ಕೆ.ಮಂಜುನಾಥ, ಡಾ.ನಾಗರಾಜ ಪಾಟೀಲ, ಡಾ.ಸಯ್ಯದ, ಕಿಲ್ಲೇದಾರ, ವಿನಾಯಕ, ಕಾಹೆರ್‌ನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು ಮತ್ತು 200 ಸ್ವಯಂ ಸೇವಕರು ಇದ್ದರು. ಸಮಾರಂಭದಲ್ಲಿ ತಂಬಾಕು ಮತ್ತು ಮಾದಕ ದ್ರವ್ಯ ಸೇವನೆಯ ಪರಿಣಾಮದ ಕುರಿತು ವಿಡಿಯೋ ಹೊಂದಿರುವ ಟ್ಯಾಬ್ಲೋ ಪ್ರದರ್ಶಿಸಲಾಯಿತು. ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕಿ ಡಾ. ಅಶ್ವಿನಿ ನರಸಣ್ಣವರ ವಂದಿಸಿದರು.