

ಬಾಳೆಹೊನ್ನೂರು: ಭಾರತವನ್ನು ನಶೆ ಮುಕ್ತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬ ಯುವಜನರ ಪಾತ್ರ ಬಹುದೊಡ್ಡದು ಎಂದು ಎಸ್‌ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಬೂದೇಶ್ ಹೇಳಿದರು.
ಪಟ್ಟಣದ ಎಸ್‌ಜೆಆರ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದೃಢ ದೇಹ ಇದ್ದರೆ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ. ಮದ್ಯಪಾನ, ಧೂಮಪಾನ, ಗುಟ್ಕಾ, ಗಾಂಜಾ ಸೇವನೆ ಇನ್ನಿತರೆ ಮತ್ತು ಬರುವಂತಹ ಪದಾರ್ಥಗಳಿಂದ ವಿದ್ಯಾರ್ಥಿಗಳು, ಯುವಜನರು ದೂರವಿರಬೇಕು ಎಂದರು.
ಉಪನ್ಯಾಸಕ ಕೆ.ಎಂ.ರಾಕೇಶ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ನಶಾ ಮುಕ್ತ ಸಮಾಜಕ್ಕೆ ಕರೆ ನೀಡಿದರು. ಶಿಕ್ಷಕ ಬಿ.ಎಸ್.ಕುಮಾರಚಂದ್ರ ನಾಯಕ್, ಉಮಾಶಂಕರ್ ಮತ್ತಿತರರು ಹಾಜರಿದ್ದರು.