ವ್ಯಸನಮುಕ್ತ ದಿನಾಚರಣೆ ನಾಟಕ ಪ್ರದರ್ಶನ

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ: ನಗರದ ಪದ್ಮಾಂಜಲಿ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಮದ್ಯಪಾನ, ಸಿಗರೇಟ್​ ಹಾಗೂ ತಂಬಾಕುಗಳಿಂದ ಆಗುವ ದುಶ್ಪಪರಿಣಾಮದ ಕುರಿತು ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜತೆಗೆ ಮನಸ್ಸು ಪರಿವರ್ತಿಸುವ ಮೂಲಕ ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮತ್ತು ದಿನ ಆಚರಿಸಲಾಯಿತು.

ವಿದ್ಯಾರ್ಥಿಗಳು ನಾಟಕದ ಮೂಲಕ ಮದ್ಯಪಾನ ಸ್ಮಶಾನಕ್ಕೆ ಆಹ್ವಾನ, ಮುಕ್ತವಾದ ಬದುಕು ಮಾದಕ ದ್ರವ್ಯರಹಿತ ಬದುಕು, ಸದೃಢರಾಗಿರಿ, ಮಾದಕದ್ರವ್ಯ ಮುಕ್ತರಾಗಿರಿ, ಮಾದಕವಸ್ತುಗಳು ನಿನ್ನ ಶತ್ರು, ನೀನು ನಿನ್ನ ಬದುಕಿನ ಯೋಧ ಎಂಬ ಹಲವು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಾದ ಮನ್ಮೀತ, ಪ್ರೀತಮ ರಾಠೋಡ, ಕುಲಂಕರ ಬಗಲಿ, ಸಹನಾ ಶಿದ್ಯಾಲ್​, ಸಾಯಿನಾಥ, ಪೂಜಾ ಕಿರಸುರ, ಸಂಜನಾ ಚವಾಣ, ಸಚಿನ, ಇಶಾಂತ, ಸುಮಿತ ಕರಂಡೆ, ಮಾರ್ಗದರ್ಶಿ ಶಿಕಿ ತೈಸಿನ ನಿಂಬಾಳ ಮತ್ತಿತರರಿದ್ದಾರೆ.

ವಿಜಯಪುರದ ಪದ್ಮಾಂಜಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮಧ್ಯಪಾನ, ಸಿಗರೇಟ್​, ತಂಬಾಕುಗಳಿಂದ ಆಗುವ ದುಶ್ಪಪರಿಣಾಮದ ಬಗ್ಗೆ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net