ಆಶಾ ಕಾರ್ಯಕರ್ತೆಯರಿಗೆ ಔಷಧ ವಿತರಣೆ

18MAHESH2
Published on

ಚಾಮರಾಜನಗರ: ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಯುರ್ವೇದ ಔಷಧವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸೋಮವಾರ ಆಶಾ ಕಾರ್ಯಕರ್ತೆಯರಿಗೆ ವಿತರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರ ಸಲಹೆಯಂತೆ ಕ್ರಮಬದ್ಧವಾಗಿ ಔಷಧ ಉಪಯೋಗಿಸುವಂತೆ ಸಲಹೆ ನೀಡಿದರು.

ಆಯಷ್ ಆಸ್ಪತ್ರೆಯ ವೈದ್ಯ ಡಾ.ರಂಜಿತ ಮಾತನಾಡಿ, ಕರೊನಾ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚರಣ್ ಬ್ರೋನ್ ಎಂಬ ಆಯುರ್ವೇದ ಔಷಧ ನೀಡಲಾಗುತ್ತಿದೆ. ಕೋವಿಡ್-19ರ ಜತೆ ಸಮರಕ್ಕಿಳಿದಿರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧ ಇದಾಗಿದೆ. ಬೆಟ್ಟದ ನೆಲ್ಲಿಕಾಯಿಯ ಅಂಶವನ್ನು ಹೊಂದಿದ್ದು, ಪ್ರತಿದಿನ ಒಂದು ಚಮಚ ತೆಗೆದುಕೊಳ್ಳಬೇಕು. ಮದುಮೇಹ ಇರುವವರನ್ನು ಹೊರತುಪಡಿಸಿ ಉಳಿದೆಲ್ಲರೂ ಈ ಔಷಧ ಉಪಯೋಗಿಸಬಹುದು ಎಂದರು.

ಔಷಧ ಮಿತ್ರ’ ಸೇವೆ ಸ್ಥಗಿತ: ಲಾಕ್‌ಡೌನ್ ಸಂದರ್ಭ ಔಷಧ ಖರೀದಿಗಾಗಿ ಜನರು ಮನೆಯಿಂದ ಹೊರಗೆ ಬರುವುದನ್ನು ತಪ್ಪಿಸಲು ಏ. 18ರಂದು ಜಿಲ್ಲೆಯಲ್ಲಿ ಆರಂಭಿಸಿದ್ದ ‘ಔಷಧ ಮಿತ್ರ’ ಸೇವೆಯನ್ನು ಭಾನುವಾರದಿಂದ ಸ್ಥಗಿತಗೊಳಿಸಲಾಯಿತು.

ಇದರಲ್ಲಿ ತಲಾ 10 ಸರ್ಕಾರಿ ಾರ್ಮಾಸಿಸ್ಟ್‌ಗಳು ಹಾಗೂ ಸ್ವಯಂ ಸೇವಕರು ಕಾರ್ಯ ನಿರ್ವಹಿಸಿದ್ದರು. ಈ ಎಲ್ಲರಿಗೂ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಪ್ರಶಂಸನಾ ಪತ್ರ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಆರ್.ರವಿ, ಜಿ.ಪಂ. ಸಿಇಒ ಬಿ.ಎಚ್.ನಾರಾಯಣ್‌ರಾವ್, ಆಯುಷ್ ಇಲಾಖೆ ಅಧಿಕಾರಿ ರಾಚಯ್ಯ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net