ನೀರಿನ ಪೈಪ್ ತುಂಡರಿಸಿದ ಮಾದಕ ವ್ಯಸನಿ

WhatsApp Image 2025-02-03 at 18.26.50_3b9ad4c8
Published on

ಪುತ್ತೂರು: ಜಿಡೆಕಲ್ಲಿನಲ್ಲಿ ಮಾದಕ ವಸ್ತು ವ್ಯಸನಿ ಭಾನುವಾರ ೨೦೦ ಮನೆಗಳಿಗೆ ಹೋಗುವ ಕುಡಿಯುವ ನೀರಿನ ಪೈಪ್ ತುಂಡರಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಡೆಕಲ್ಲು ನಿವಾಸಿ ಯೋಗೀಶ್ ಪೂಜಾರಿ ಹುಚ್ಚಾಟ ಮೆರೆದ ಯುವಕ ಎಂದು ಗುರುತಿಸಲಾಗಿದೆ. ಜಿಡೆಕಲ್ಲು ಶಾಲಾ ಸಮೀಪವಿರುವ ನೀರಿನ ಟ್ಯಾಂಕ್‌ನಿಂದ ಸಂಪರ್ಕವಿರುವ ಎಲ್ಲ ಪೈಪ್‌ಗಳನ್ನು ತುಂಡರಿಸಿದ್ದಾನೆ. ಈತ ಕಳೆದ ೩-೪ ದಿನಗಳಿಂದ ರಸ್ತೆಯಲ್ಲಿ ಸಿಕ್ಕಿದವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಎಂದು ಊರಿನವರು ತಿಳಿಸಿದ್ದಾರೆ. ಪೈಪ್‌ಲೈನ್ ತುಂಡರಿಸುತಿದ್ದಾಗ ಊರಿನವರ ಕೈಗೆ ಸಿಕ್ಕಿ ಬಿದ್ದಿದ್ದ, ನಂತರ ತಪ್ಪಿಸಿಕೊಂಡಿದ್ದು, ರೈಲಿನಲ್ಲಿ ಪುತ್ತೂರಿಗೆ ಬಂದಾಗ ಊರಿನವರ ಕೈಗೆ ಸಿಕ್ಕಿಬಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net