ಸ್ವಸ್ತ ಸಮಾಜ ನಿರ್ಮಾಣಕ್ಕೆ ಮಾದಕ‌ ದ್ರವ್ಯದಿಂದ ದೂರವಿರಿ

Published on

ಕಾರವಾರ: ಸ್ವಸ್ತ ಸಮಾಜ ನಿರ್ಮಾಣಕ್ಕೆ ಮಾದಕ ದ್ರವ್ಯಗಳನ್ನು ಸಂಪೂರ್ಣ ನಿಷೇಧಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ.ರಾಯ್ಕರ್ ಹೇಳಿದರು.
ಜಿಲ್ಲಾ ವಿದ್ಯಾರ್ಥಿ ಒಕ್ಕೂಟದಿಂದ ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಪರಾಧ ಕೃತ್ಯಗಳನ್ನು ಮಾಡುವವರಲ್ಲಿ ಹೆಚ್ಚಿನವರು ಮಾದಕ ದ್ರವ್ಯಗಳ ಸೇವನೆ ಮಾಡುವವರೇ ಆಗಿದ್ದಾರೆ. ಅಂಥವರಿಂದ ಸಮಾಜದ ಸ್ವಾಸ್ತ್ಯ ಕೆಡುತ್ತಿದೆ ಎಂದರು. ಮಾದಕ ದ್ರವ್ಯ ಸೇವಿಸಿದವರು ಸೈಕೋ ರೀತಿ ವರ್ತಿಸುತ್ತಾರೆ. ನೀವು ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ, ನಿವೃತ್ತ ಶಿಕ್ಷಕ ಅರುಣಕುಮಾರ ಸಾಳುಂಕೆ, ಡಿಎಚ್‌ಒ ಕಚೇರಿಯ ಅಧಿಕಾರಿ ಡಾ.ಶಂಕರ್ ರಾವ್, ವೈದ್ಯ ಡಾ.ಕೀರ್ತಿ ನಾಯಕ, ಪತ್ರಕರ್ತ ಗಂಗಾಧರ ಹಿರೇಗುತ್ತಿ ವೇದಿಕೆಯಲ್ಲಿದ್ದರು. ಮಿತ್ರ ಸಮಾಜದಿಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಶಾಲೆ, ಕಾಲೇಜ್‌ಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net