ಮಾದಕ ವ್ಯಸನವು ಸಾಮಾಜಿಕ ಪಿಡುಗು

gan (6)
Published on

ಕುಂದಾಪುರ: ನಮ್ಮ ಬದುಕು, ಆರೋಗ್ಯವನ್ನು ಹಾಳು ಮಾಡುವ ಮಾದಕ ವ್ಯಸನವು ಸಾಮಾಜಿಕ ಪಿಡುಗಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಹಾಳಾಗುವುದಲ್ಲದೆ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತದೆ. ಮಾನಸಿಕ ಒತ್ತಡ, ನಿದ್ರಾಹೀನತೆಯಂತಹ ಸಮಸ್ಯೆ ಮಾದಕ ವ್ಯಸನಿಗಳನ್ನು ಕಾಡುತ್ತಿದೆ. ಯುವಜನತೆ ಮಾದಕ ವ್ಯಸನದಿಂದ ಮುಕ್ತರಾಗಿ ಸುಸ್ಥಿರ ಸಮಾಜ ಕಟ್ಟಲು ಬದ್ಧರಾಗಬೇಕು ಎಂದು ಕುಂದಾಪುರ ಪೊಲೀಸ್ ಠಾಣೆ ಎಎಸ್‌ಐ ಶಾಂತರಾಜ್ ಹೇಳಿದರು.

ಬಾಂಡ್ಯಾ ಎಜುಕೇಶನ್ ಟ್ರಸ್ಟ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕುಂದಾಪುರ ಪೊಲೀಸ್ ಇಲಾಖೆ ಆಶ್ರಯದಲ್ಲಿ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಮಾದಕ ವ್ಯಸನಮುಕ್ತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುರುಕುಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಡಾ.ರೂಪಾ ಶೆಣೈ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಮಾದಕ ವ್ಯಸನಮುಕ್ತ ಭಾರತ ಅಭಿಯಾನದ ಘೋಷಣಾ ವಿಧಿ ಬೋಧಿಸಲಾಯಿತು.

ಪೇದೆ ನಾರಾಯಣ ಉಪಸ್ಥಿತರಿದ್ದರು. ಗಣಕಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಸ್ವಾಗತಿಸಿದರು. ಡಾ.ಕೃಷ್ಣರಾಜ ಕರಬ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕಶಾಸ್ತ್ರ ಉಪನ್ಯಾಸಕ ಪ್ರಶಾಂತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net