

ಮಂಡ್ಯ: ಯುವಕರು ವಿದ್ಯಾಭ್ಯಾಸದ ಸಮಯದಲ್ಲಿ ಯಾವುದೇ ರೀತಿಯ ದುರಭ್ಯಾಸಗಳ ಕಡೆ ಗಮನಹರಿಸಬೇಡಿ. ಮಾದಕ ವಸ್ತುಗಳ ವ್ಯಸನದಿಂದ ದೂರ ಉಳಿಯಿರಿ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಿ ಎಂದು ಮನೋವೈದ್ಯ ಡಾ.ಶಶಾಂಕ್ ಸಲಹೆ ನೀಡಿದರು.
ನಗರದ ಮಾಜಿ ಪುರಸಭೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೋಟರಿ, ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ರವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಸನ ಎಂದರೆ ಕೆಟ್ಟ ಅಭ್ಯಾಸ ಅಥವಾ ದುರಭ್ಯಾಸ ಎಂದರ್ಥ. ಮಾದಕ ವಸ್ತುಗಳು ಆರಂಭದಲ್ಲಿ ಚಟವಾಗಿ ಶುರುವಾಗಿ ಖಾಯಿಲೆಯಾಗಿ ಪರಿವರ್ತನೆ ಯಾಗುತ್ತದೆ.
ತಂಬಾಕು,ಮಧ್ಯಪಾನ, ಗಾಂಜಾ ಅತಿ ಹೆಚ್ಚು ಬಳಕೆಯಾಗುತ್ತಿರುವ ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಜನರ ಜೀವನ ಸರ್ವನಾಶವಾಗುತ್ತದೆ ಎಂದರು.
ಯೋಗ ಗುರುಗಳಾದ ಲಕ್ಷ್ಮಣ್, ಜಿಲ್ಲಾ ವಾರ್ತಾಧಿಕಾರಿ ಎಸ್. ಎಚ್.ನಿರ್ಮಲಾ, ಉಪನ್ಯಾಸಕರಾದ ಎಂ.ಎಸ್.ಸವಿತಾ, ಮಾನಸಿಕ ತಜ್ಞ ಸುಹೆಲ್, ಜಿಲ್ಲಾ ಸಲಹೆಗಾರರಾದ ತಿಮ್ಮರಾಜು ಇತರರಿದ್ದರು.