

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಿಭಾಗೀಯ ಬಳಕೆದಾರರ ಸಲಹಾ ಸಮಿತಿಗೆ (ಡಿಆರ್ಯುುಸಿಸಿ) ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಅವರು ಸಂಸ್ಥೆಯ ಪರವಾಗಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಅವರ ಅಧಿಕಾರವಧಿ 2024ರ ಆ. 16 ರಿಂದ 2026ರ ಆ. 15 ರವರೆಗೆ ಇರುತ್ತದೆ.
ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ವಿರೇಶ ಮೊಟಗಿ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಅವರು ಬಳಿಗಾರ ಅವರನ್ನು ಅಭಿನಂದಿಸಿದ್ದಾರೆ.
ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ನೈಋತ್ಯ ರೈಲ್ವೆಯ ವಿಭಾಗೀಯ ಮಟ್ಟದಲ್ಲಿ ಸಲಹೆ-ಸೂಚನೆಗಳು ಇದ್ದಲ್ಲಿ ಸಂಸ್ಥೆಗೆ ಬರೆದು ತಿಳಿಸುವಂತೆ ಕೋರಲಾಗಿದೆ.