ನರ್ಸಿಂಗ್ ಪದವಿದರರಿಗೆ ಜರ್ಮನ್ ದೇಶದಲ್ಲಿ ಉದ್ಯೋಗಕ್ಕಾಗಿ ಸುವರ್ಣವಕಾಶ - ಡಾ. ರವಿ ಪಾಟೀಲ್

IMG-20241203-WA0006.jpg
Published on

ಬೆಳಗಾವಿ:ಆರೋಗ್ಯ ಹಾಗೂ ಶಿಕ್ಷಣ ಸೇವಾ ಸಂಸ್ಥೆಯಿಂದ ಅತ್ಯಾಧುನಿಕ ತರಬೇತಿ ನೀಡಲಾಗುತ್ತಿದೆ ಎಂದು ಡಾ.ರವಿ ಪಾಟೀಲ ಹೇಳಿದರು.

ನಗರದಲ್ಲಿ ಜುರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ತಿಂಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ನರೇಂದ್ರ ಮೋದಿ ಜೀ ಜರ್ಮನ ದೇಶದ ಚಾನ್ಸಲರ್ ಅವರೊಂದಿಗೆ ಸುಮಾರು ಒಪ್ಪಂದಗಳನ್ನು ಮಾಡಲಾಗಿದ್ದು, ಅದರಲ್ಲಿ ಬಹುಮುಖ್ಯವಾಗಿ ಜರ್ಮನ್ ದೇಶವು ಭಾರತೀಯ skilled professionals ಗಾಗಿ VISA ವೀಸಾ ಸಂಖ್ಯೆಯನ್ನು 20,000 ದಿಂದ 90,000 ಗೆ ಹೆಚ್ಚಿಸಿದೆ.

ನರ್ಸಿಂಗ್ ವಿಧ್ಯಾರ್ಥಿಗಳಿಗೆ ಜರ್ಮನಿಯಲ್ಲಿ ತುಂಬಾ ಬೇಡಿಕೆ ಇರುವುದರಿಂದ ಇದೊಂದು ಸುವರ್ಣಾವಕಾಶ. ಭಾರತದ ನರ್ಸಿಂಗ್ ಪದವಿದರರು *ಜರ್ಮನ್ ದೇಶದಲ್ಲಿ ನರ್ಸಿಂಗ್ ಹುದ್ದೆಗೆ ಸೇರಿದ್ದಲ್ಲಿ ತಿಂಗಳಿಗೆ Rs.3,00,000/- ರಿಂದ Rs.4,00,000/- ಮಾಸಿಕ ಸಂಬಳ ಗಳಿಸುತ್ತಾರೆ ಎಂದರು.

ಈಗಾಗಲೇ ಡಾ.ರವಿ ಪಾಟೀಲ್ ಆರೋಗ್ಯ ಹಾಗೂ ಶಿಕ್ಷಣ ಸಂಸ್ಥೆಯಿಂದ 20 ವಿಧ್ಯಾರ್ಥಿಗಳು ಜರ್ಮನಿಯಲ್ಲಿ ನರ್ಸಿಂಗ್ ಹುದ್ದೆಯಲ್ಲಿದ್ದಾರೆ. ಈಗ ಬರುವ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆಯು 50 ರಿಂದ 60 ವರೆಗೆ ತಲುಪಲಿದೆ. ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net