ಸಾತೊಡ್ಡಿ ಜಲಪಾತದ ಬಳಿ ಮುಳುಗಿ ಸಾವು

satoddi-Falls.
Published on

ಯಲ್ಲಾಪುರ: ಪ್ರವಾಸಿಗನೊಬ್ಬ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಸಾತೊಡ್ಡಿ ಜಲಪಾತದ ಬಳಿ ಮಂಗಳವಾರ ನಡೆದಿದೆ.

ಹುಬ್ಬಳ್ಳಿಯ ಮೌಲಾಲಿದರ್ಗಾ ಸಮೀಪದ ಹಸನ ಮದರಸಾಬ್ ಕಾಲೇಮದರ (36) ಮೃತ ವ್ಯಕ್ತಿ. ಈತ ಸಂಬಂಧಿಕರು ಹಾಗೂ ಗೆಳೆಯರೊಂದಿಗೆ ಮಂಗಳವಾರ ಸಂಜೆ ಸಾತೊಡ್ಡಿ ಜಲಪಾತ ವೀಕ್ಷಣೆಗೆ ಬಂದಿದ್ದ. ಸ್ನಾನ ಮಾಡಲು ನೀರಿಗೆ ಇಳಿದ ವೇಳೆಯಲ್ಲಿ ಆಕಸ್ಮಿಕ ಕಾಲು ಜಾರಿ‌ ನೀರಿಗೆ ಬಿದ್ದು, ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವಕ್ಕಾಗಿ ಶೋಧ ನಡೆಸಿದ್ದು, ರಾತ್ರಿ ಶವ ದೊರೆತಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net