ಈಜಲು ಹೋದ ಯುವಕ ನೀರುಪಾಲು

drown web
Published on

ಗಂಗೊಳ್ಳಿ: ಕುಂದಾಪುರ ತಾಲೂಕಿನ ಮೊವಾಡಿ ಎಂಬಲ್ಲಿ ಭಾನುವಾರ ಸೌಪರ್ಣಿಕಾ ನದಿಯಲ್ಲಿ ಈಜಲು ಇಳಿದ ಯುವಕ ನೀರುಪಾಲಾಗಿದ್ದಾನೆ.

ಗುಜ್ಜಾಡಿ ಗ್ರಾಮದ ಕೊಡಪಾಡಿ ಹೋಲಿಕ್ರಾಸ್ ಸಮೀಪದ ನಿವಾಸಿ ಮಹೇಂದ್ರ (24) ನೀರುಪಾಲಾದವರು. ಮಹೇಂದ್ರ, ಗುಜ್ಜಾಡಿ ಗ್ರಾಮದ ಕೊಡಪಾಡಿ ನಿವಾಸಿ ಆಶಿಕ್(20) ಮತ್ತು ತ್ರಾಸಿ ಆನಗೋಡು ನಿವಾಸಿ ಶರತ್ (25) ಎಂಬುವರು ಭಾನುವಾರ ಮಧ್ಯಾಹ್ನ ತ್ರಾಸಿಯ ಮೊವಾಡಿ ಸೇತುವೆ ಕೆಳಗಡೆ ವಾಯುವಿಹಾರಕ್ಕೆ ಕುಳಿತುಕೊಂಡಿದ್ದು, ಮಹೇಂದ್ರ ಮತ್ತು ಆಶಿಕ್ ಈಜಲು ಇಳಿಯುತ್ತಿದ್ದಂತೆಯೇ ಮಹೇಂದ್ರ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾನೆ. ಇದೇ ವೇಳೆ ಆಶಿಕ್ ಕೂಡ ಅಪಾಯಕ್ಕೆ ಸಿಲುಕಿದಾಗ ಸ್ಥಳೀಯರಾದ ರತ್ನಾಕರ ಕಾಂಚನ್ ಮತ್ತು ಯೋಗೇಂದ್ರ ಕಾಂಚನ್ ಎಂಬುವರು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದು, ಭಾನುವಾರ ರಾತ್ರಿವರೆಗೆ ಪತ್ತೆಯಾಗಿಲ್ಲ. ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂಜಾ ನಾಯ್ಕ ಮತ್ತಿತರರು ಸ್ಥಳದಲ್ಲಿದ್ದು ಶೋಧ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ.

ಭಾನುವಾರ ರಜೆಯ ಮೋಜು ಸವಿಯಲು ಈ ಮೂವರು ಯುವಕರು ಮಧ್ಯಾಹ್ನ ಮೊವಾಡಿಗೆ ತೆರಳಿದ್ದರು. ನೀರಿಗಿಳಿದ ಸ್ಥಳದಲ್ಲಿ ಆಳವಿದ್ದು, ಆಶಿಕ್ ಕೂದಲೆಳೆಯ ಅಂತರದಲ್ಲಿ ಸ್ಥಳೀಯರ ನೆರವಿನಿಂದ ಅಪಾಯದಿಂದ ಪಾರಾಗಿದ್ದಾರೆ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net