ನದಿಗೆ ಬಿದ್ದು ಮೀನುಗಾರ ಸಾವು

devendra web
Published on

ಗಂಗೊಳ್ಳಿ: ಪಂಚಗಂಗಾವಳಿ ನದಿಯಲ್ಲಿ ಮೀನು ಹಿಡಿಯಲೆಂದು ಹೋಗಿ ನಾಪತ್ತೆಯಾದ ಮೀನುಗಾರ ಮಲ್ಯರಬೆಟ್ಟು ನಿವಾಸಿ ದೇವೇಂದ್ರ ಖಾರ್ವಿ ಯಾನೆ ರವಿ (35) ಎಂಬುವರ ಮೃತದೇಹವು ಗಂಗೊಳ್ಳಿ ಕಳುವಿನ ಬಾಗಿಲು ಎಂಬಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.

ಗುರುವಾರ ಸಂಜೆ 6.30 ಕ್ಕೆ ಮನೆಯಿಂದ ಮೀನುಗಾರಿಕೆಗೆ ನಡೆಸಲು ದೋಣಿಯಲ್ಲಿ ತೆರಳಿದ್ದ ದೇವೇಂದ್ರ ಅವರು ರಾತ್ರಿ 10 ಗಂಟೆಯಾದರೂ ವಾಪಸ್ ಮರಳಿ ಮನೆಗೆ ಬಂದಿರಲಿಲ್ಲ. ರಾತ್ರಿ ಮನೆಯವರು ಕರೆ ಮಾಡಿದಾಗ ಪ್ರತಿಕ್ರಿಯೆ ಬಾರದಿದ್ದಾಗ ಹುಡುಕಾಟ ನಡೆಸಿದ್ದು ಬಂದರು ಬಳಿ ಹೊಳೆಯಲ್ಲಿ ದೋಣಿ ಸಿಕ್ಕಿದೆ. ಮೀನುಗಾರಿಕೆ ನಡೆಸುವಾಗ ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆಯಿಂದ ರಾತ್ರಿಯಿಂದ ಶುಕ್ರವಾರ ಸಂಜೆ ತನಕವೂ ಹುಡುಕಾಟ ನಡೆಸಲಾಗಿತ್ತು. ಮುಳುಗು ತಜ್ಞರು, ಅಗ್ನಿಶಾಮಕ ದಳದವರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. ಶನಿವಾರ ಬೆಳಗ್ಗೆ ಕಳುವಿನ ಬಾಗಿಲ ಬಳಿ ಮೃತದೇಹ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net