ಗೋವಿಂದ ಕಾರಜೋಳರಿಂದ ಬರ ಅಧ್ಯಯನ ನಾಳೆ

Capture- 2
Published on

ಹೊಸಪೇಟೆ: ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಬರ ಅಧ್ಯಯನ ತಂಡ ಸೋಮವಾರ(ನ.6) ರಂದು ವಿಜಯನಗರ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

ಸೋಮವಾರ ಬೆಳಗ್ಗೆ 10.30ಕ್ಕೆ ಹೂವಿನಹಡಗಲಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಬೆಳಗ್ಗೆ 11.30ಕ್ಕೆ ಮೋರಗೇರಿ, ಮಧ್ಯಾಹ್ನ 12 ಗಂಟೆಗೆ ಸೊನ್ನೆ ಗ್ರಾಮಕ್ಕೆ ಭೇಟಿ ನೀಡುವರು.

ಹಗರಿಬೊಮ್ಮನಹಳ್ಳಿ ಮಧ್ಯಾಹ್ನ 2 ಗಂಟೆಗೆ ಭೋಜನ ಸ್ವೀಕರಿಸಿದ ಬಳಿಕ ತಾಲೂಕಿನ ದಶಮಾಪುರ, ಹನಸಿ, ಸಂಜೆ 4.30ಕ್ಕೆ ಕೂಡ್ಲಿಗಿ ತಾಲೂಕಿನ ಹಿರೆಹೆಗ್ಡಾಳ, ಸಾಸಲವಾಡ ಮತ್ತು ಶಿವಪುರ ಗ್ರಾಮದಲ್ಲಿರೈತರ ಜಮೀನುಗಳಿಗೆ ಭೇಟಿ ನೀಡಿ, ಬರ ಅವಲೋಕಿಸಿ, ರೈತರಿಂದ ಅಹವಾಲು ಆಲಿಸುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಚನ್ನಬಸವನಗೌಡ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net