ಬರಪೀಡಿತ ತಾಲೂಕಾಗಿ ಹೊನ್ನಾಳಿ ಘೋಷಣೆ

mkg
Published on

ಹೊನ್ನಾಳಿ: ಸರ್ಕಾರ ಹೊನ್ನಾಳಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು, ನಾವೆಲ್ಲರೂ ಬರವನ್ನು ಸಮರ್ಥವಾಗಿ ಎದುರಿಸಿ, ಕೆಲಸ ಮಾಡೋಣ ಎಂದು ತಹಸೀಲ್ದಾರ್ ಪಟ್ಟರಾಜೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಂಗ್ರಹ ಸೇರಿದಂತೆ ಅನೇಕ ಮುಂಜಾಗ್ರತೆ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಅಧಿಕಾರಿಗಳ ಸಹಕಾರ ಅತ್ಯಗತ್ಯ. ಶಾಸಕರ ಸಹಕಾರದಿಂದ ನಾವೆಲ್ಲರೂ ಕೆಲಸ ಮಾಡೋಣ ಎಂದರು.

ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ತಾಲೂಕು ಕಚೇರಿಗೆ ತಮ್ಮ ಕೆಲಸಕ್ಕೆ ಬಂದಿರುತ್ತಾರೆ. ಅವರನ್ನು ಯಾವುದೇ ಕಾರಣಕ್ಕೂ ಅಲೆಸಬಾರದು. ತತ್‌ಕ್ಷಣ ಕೆಲಸ ಮಾಡಿಕೊಡಬೇಕೆಂದರು.

ಅಧಿಕಾರಿಗಳು ಸಭೆ ಹಾಗೂ ರಜಾದಿನ ಹೊರತುಪಡಿಸಿ ಉಳಿದೆಲ್ಲ ದಿನ ಕೇಂದ್ರ ಕಚೇರಿಯಲ್ಲೇ ಇರಬೇಕು. ಕಚೇರಿಗೆ 10ರ ಒಳಗೆ ಬರಬೇಕು 6ರ ನಂತರ ಕಚೇರಿಯಿಂದ ಹೊರ ಹೋಗಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net