

ರಾಯಚೂರು: ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ ಹಾಗೂ ಜಮೀನು ಕಬಳಿಸಲು ಪ್ರಯತ್ನಿಸಿದ ಸಚಿವ ಡಿ.ಸುಧಾಕರರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಜೆಡಿಎಸ್‌ನಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸಚಿವರ ಮೇಲೆ ದೌರ್ಜನ್ಯ, ವಂಚನೆ ಮತ್ತು ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ಕಾಯ್ದೆಯಡಿ ಎ್ಐಆರ್ ದಾಖಲಾಗಿದ್ದರೂ ಬಂಸಲಾಗಿಲ್ಲ ಎಂದು ದೂರಿದರು.
ಸಚಿವ ಡಿ.ಸುಧಾಕರ ಬೆಂಬಲಿಗರು ಮತ್ತು ಸೆವೆನ್ ಹಿಲ್ಸ್ ಡೆವಲಪರ್ಸ್‌ಗೆ ಸೇರಿದ ಗುಂಡಾಗಳು ಯಲಹಂಕದಲ್ಲಿನ ದಲಿತರಿಗೆ ಸೇರಿದ ಭೂಮಿಯನ್ನು ಕಬಳಿಕೆ ಮಾಡಲು ಮನೆಗಳನ್ನು ಜೆಸಿಬಿಯಿಂದ ಮೂಲಕ ಧ್ವಂಸ ಮಾಡಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದರೆ ತಕ್ಷಣವೇ ಬಂಸಬೇಕು ಎನ್ನುವ ಆದೇಶವಿದ್ದರೂ ಡಿ.ಸುಧಾಕರರನ್ನು ಬಂಸದೆ ಕಾಪಾಡಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಬಂಸಲು ಅಗತ್ಯ ಕ್ರಮಕೈಗೊಳ್ಳಬೇಕು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸುತ್ತಿರುವುದನ್ನು ಕೈಬಿಡಬೇಕು. ಇದರಿಂದ ದಲಿತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಪದಾಕಾರಿಗಳಾದ ಯುಸ್ೂಖಾನ್, ಬಿ.ತಿಮ್ಮಾರೆಡ್ಡಿ, ಸಣ್ಣ ನರಸಿಂಹ ನಾಯಕ, ಎನ್.ಶಿವಶಂಕರ, ವಿಶ್ವನಾಥ ಪಟ್ಟಿ, ಲಕ್ಷ್ಮಿಪತಿ ಗಾಣಧಾಳ, ರಾಮಕೃಷ್ಣ, ನರಸಿಂಹಲು ಆಶಾಪುರ, ಮಹೇಶಕುಮಾರ, ನರಸಿಂಹಲು ಪಾಲ್ಗೊಂಡಿದ್ದರು.