

ಬೆಂಗಳೂರು: ಬಿಗ್ಬಾಸ್ ಕನ್ನಡ 10ನೇ ಸೀಸನ್ನಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಡ್ರೋನ್ ಪ್ರತಾಪ್ ರನರ್ಅಪ್ ಆಗಿದ್ದಾರೆ. ಡ್ರೋನ್ ಪ್ರತಾಪ್ಗೆ ಬಿಗ್ಬಾಸ್ ವಿನ್ನರ್ ಪಟ್ಟ ಮಿಸ್ ಆಗಿದ್ದಕ್ಕೆ ಬೇಸರಗೊಂಡ ಕರಾವಳಿ ಯುವಕನ ಅರ್ಧ ಗಡ್ಡ-ಮೀಸೆ ಸೇವ್ ಮಾಡಿದ್ದಾನೆ.
ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಟಾಸ್ಕ್ ಕೊಡ್ತಿದ್ರು. ಅದನ್ನ ಸ್ಪರ್ಧಿಗಳು ಆಡುವ ಮೂಲಕವಾಗಿ ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದರು. ಇವರ ಆಟವನ್ನ ನೋಡಿದ ಅನೇಕರು ತಮ್ಮದೆ ಅಭಿಪ್ರಾಯ ಕೊಡ್ತಿದ್ದರು. ಆದರೆ ಕರಾವಳಿಯ ಯುವಕ ಎಲ್ಲವನ್ನೂ ಸೀರಿಯೆಸ್ ಆಗಿಯೇ ತೆಗೆದುಕೊಂಡಿದ್ದಾನೆ.
ಡ್ರೋನ್ ಪ್ರತಾಪ್ ಆಟದ ಮೇಲೆ ಗೆಲುವಿನ ಬಗ್ಗೆ ತುಂಬಾನೆ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದಾನೆ. ಅದೇ ಒಂದು ವಿಶ್ವಾಸದಲ್ಲಿಯೇ ಈ ಯುವಕ ಒಂದು ಸವಾಲ್ ಕೂಡ ಎಸೆದಿದ್ದಾನೆ. ಪ್ರತಾಪ್ ಸೋತರೆ ಅರ್ಧ ಮೀಸೆ ಮತ್ತು ಅರ್ಧ ಗಡ್ಡ ತೆಗೆಯುವುದಾಗಿ ಹೇಳಿಕೊಂಡಿದ್ದಾರೆ. ಆ ಒಂದು ಮಾತನ್ನ ಇದೇ ಯುವಕ ಇದೀಗ ನಿಜವಾಗಿಸಿದ್ದಾನೆ.
ಝೈನುಲ್ ಆಬಿದ್ ಕಡಬ ತಾಲೂಕಿನ ಬಂಟ್ರ ಗ್ರಾಮ ಪಾಲೆತ್ತಡ್ಕ ನಿವಾಸಿ ಆಗಿದ್ದಾರೆ. ಪ್ರತಾಪ್ ಸೋತರ ಅರ್ಧ ಮೀಸೆ-ಗಡ್ಡ ತೆಗೆಯುವುದಾಗಿ ಹೇಳಿದ್ದರು. ಹಸಿ ಮೆಣಸಿನಕಾಯಿ ತಿನ್ನೋದಾಗಿಯೂ ಹೇಳಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಪ್ರತಾಪ್ ಸೋತ ಬಳಿ ಈ ಎರಡೂ ಕೆಲಸವನ್ನ ಝೈನುಲ್ ಆಬಿದ್ ಮಾಡಿದ್ದಾರೆ. ಆ ಒಂದು ವಿಡಿಯೋ ಕೂಡ ಇದೀಗ ಹೆಚ್ಚು ವೈರಲ್ ಆಗಿದೆ.