

ಬೆಂಗಳೂರು: ಬಿಗ್ಬಾಸ್ ಸೀಸನ್ 10ರ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಳ್ಳುವವರು ಯಾರು ಎನ್ನುವುದನ್ನು ತಿಳಿಯಲು ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದೆ. ಬಿಗ್ಬಾಸ್ ಫಿನಾಲೆ ವೀಕ್ನಲ್ಲಿ 5 ಮಂದಿ ಸ್ಪರ್ಧಿಗಳು ಇದ್ದಾರೆ. ಆದರೆ ಈ ಸ್ಪರ್ಧಿಗಳ ಪೈಕಿ ಇಬ್ಬರ ಕುರಿತಾಗಿ ಒಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ. ಅದೇನಪ್ಪಾ ಅಂತಾ ನೋಡುವುದಾದರೆ....
ಕಾರ್ಯಕ್ರಮ ಪ್ರಾರಂಭಿಸುವ ಮೊದಲು ಬಿಗ್ಬಾಸ್ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಗ್ನಲ್ಲಿರುವ ಕೆಲವು ಸೆಲೆಬ್ರೆಟಿಗಳನ್ನು ಪತ್ತೆ ಹಚ್ಚಿ ಅವರ ಕುರಿತಾಗಿ ಕೆಲವು ರಿಸರ್ಚ್ ಮಾಡಿ ದೊಡ್ಡಮನೆಗೆ ಕರೆತರಲಾಗುತ್ತದೆ. ಹೀಗೆ ಮನೆಯೊಳಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಗೆಲ್ಲಲೆ ಬೇಕು ಎನ್ನುವ ಹಠದಿಂದ ಟಾಸ್ಕ್, ಡ್ರಾಮಾ, ಸಿಂಪತಿ, ಗೆಳತನ, ಪ್ರೀತಿ, ಎನ್ನುವ ಮುಖವಾಡ ಹಾಕಿಕೊಂಡು ಆಟ ಶುರು ಮಾಡುತ್ತಾರೆ. ಇದನ್ನು ಟಿವಿಯಲ್ಲಿ ನೋಡುವ ವೀಕ್ಷಕ ತಮ್ಮ ನೆಚ್ಚಿನ ಆಟಗಾರ ಯಾರು ಅವರಿಗೆ ಸಪೋರ್ಟ್ ಮಾಡುತ್ತಾ ಅವರನ್ನು ಮೆನೆಯಲ್ಲಿಯೇ ಉಳಿಸಲು ವೋಟ್ ಮಾಡುತ್ತಾ ಬರುತ್ತಾನೆ. ಪೈನಲ್ ಆಗಿ ಯಾರು ಉಳಿತಾರೆ ಅವರಿಗೆ ಬಿಗ್ಬಾಸ್ ಕಪ್, ನಗದು ಬಹುಮಾನ ನೀಡಲಾಗುತ್ತದೆ. ಬಿಗ್ಬಾಸ್ನಿಂದ ಹೊರ ಬಂದ ಮೇಲೆ ಇವರಿಗೆ ನಟನೆಯ ಹಲವಾರು ಅವಕಾಶಗಳು ಒದಗಿ ಬಂದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ.
ಬಿಗ್ಬಾಸ್ ಸ್ಪರ್ಧಿಗಳು ಮನೆಯೊಳಗೆ ಯಾವ ರೀತಿ ಆಟ ಆಡ್ತಾ ಇದ್ದಾರೆ ಅನ್ನೋದನ್ನ ಪ್ರತಿನಿತ್ಯ ಜನರು ನೋಡ್ತಾನೆ ಇರ್ತಾರೆ. ಆ ಪ್ರಕಾರ ಜನರಿಗೆ ಗೆಲ್ಲುವವರು ಯಾರು ಎಂಬ ಒಂದು ಸಂಭವನೀಯ ಸ್ಪರ್ದಿಗಳ ಲಿಸ್ಟ್ ಸಿಕ್ಕಿರುತ್ತದೆ. ಹೀಗೆ ಬಿಗ್ಬಾಸ್ ಸೀಸನ್ 10ರ ಟಾಪ್ 5 ಪಟ್ಟಿಯಲ್ಲಿ ಸಂಗೀತಾ, ತುಕಾಲಿ ಸಂತೋಷ್, ವರ್ತೂರ್ ಸಂತೋಷ್, ವಿನಯ್ ಗೌಡ , ಕಾರ್ತಿಕ್,ಡ್ರೋನ್ ಪ್ರತಾಪ್ ಇದ್ದಾರೆ. ಇವರಲ್ಲಿ ಬಿಗ್ಬಾಸ್ ಕಪ್ನಾ ಮನೆಗೆ ತಗೊಂಡು ಹೋಗುವುದು ಯಾರು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಾಗ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಬಿಗ್ಬಾಸ್ಗೆ ಬರಲ್ಲ ಎಂದು ಹೇಳಿ ಹೇಳಿ ಫೈನಲ್ ತಲುಪಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಈ ಹಿಂದೆ ಸಂಗೀತಾ ಶೃಂಗೇರಿ ಅವರನ್ನು ಬಿಗ್ಬಾಸ್ ಮನೆಗೆ ಹೋಗ್ತಿರಾ? ಎಂದು ಕೇಳಿದ್ದಕ್ಕೆ ಇಲ್ಲ ಸಾಧ್ಯವೆ ಇಲ್ಲ.. ಎಷ್ಟೇ ಕೋಟಿ ಕೊಟ್ಟರು ಹೋಗಲ್ಲ.. ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದರು.
ಬಿಗ್ಬಾಸ್ ಮನೆಗೆ ಪ್ರತಾಪ್ ಹೋಗ್ತಾರೆ ಎನ್ನುವ ಸುದ್ದಿ ಇದೆ ಎಂದು ನಿರೂಪಕರೊಬ್ಬರು ಹೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್.. ಬಿಗ್ಬಾಸ್ ತಂಡ ನನ್ನನ್ನು ಸಂಪರ್ಕಿಸಿತ್ತು. ಆದರೆ ನನಗೆ ಇಂಟ್ರಸ್ಟ್ ಇಲ್ಲ. ನನಗೆ ಮಾಡಲು ತುಂಬ ಕೆಲಸ ಇದೆ. ತಿಂಗಳಾನುಗಟ್ಟಲೆ ಒಂದೆ ಕಡೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಬಿಗ್ಬಾಸ್ ಮನೆಗೆ ನಾನು ಹೋಗಲ್ಲ..ಹೋಗಲ್ಲ ಎಂದು ಹೇಳಿದ ಡ್ರೋನ್ ಪ್ರತಾಪ್ ಹಾಗೂ ಶೃಂಗೇರಿ ಇಂದು ಪೈನಲ್ ಪಟ್ಟಿಯಲ್ಲಿದ್ದಾರೆ. ಈ ಕುರಿತಾಗಿ ನೆಟ್ಟಿಗರು ಈ ಇಬ್ಬರು ಹೇಗೆ ಬಿಗ್ಬಾಸ್ ಮನೆಯೊಳಗೆ ಹೋದ್ರು? ಫೈನಲಿಸ್ಟ್ ಕೂಡಾ ಆಗಿದ್ದಾರೆ ಹೇಗೆ ಸಾಧ್ಯ? ಇವ್ರನ್ನ ನಂಬುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.
ನಿನ್ನೆ ಬಿಗ್ಬಾಸ್ ಮನೆಯೊಳಗೆ ಮಾಧ್ಯಮಮಿತ್ರರಾಗಿ ಎಂಟ್ರಿ ಕೊಟ್ಟಿರುವ ಜಾನ್ಹವಿ ಕಾರ್ತಿಕ್ ಹಾಗೂ ಕಿರಿಕ್ ಕೀರ್ತಿ ಟಾಪ್ 5 ಸ್ಪರ್ಧಿಗಳಿಗೆ ಹಲವರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಪ್ರತಾಪ್ ಹಾಗೂ ಸಂಗೀತಾಗೆ ಬಿಗ್ಬಾಸ್ ಬರಲ್ಲ ಅಂತಾ ಹೇಳಿ ಬಿಗ್ಬಾಸ್ಗೆ ಬಂದಿದ್ದೀರಾ ಎಂದು ಕೇಳಿದ್ದಾರೆ? ಈ ಪ್ರಶ್ನೆಗೆ ಉತ್ತರಿಸಿದ ಸಂಗೀತಾ ಹೀಗೆ ಇರುತ್ತೆ ಅಂತಾ ಗೊತ್ತಿರಲಿಲ್ಲ.. ಇದೊಂದು ಹೊಸ ಪ್ರಪಂಚ.. ನಾನೂ ಇಲ್ಲಿಯ ನೆನಪುಗಳನ್ನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ.
ಪ್ರತಾಪ್ ಮಾತನಾಡಿ, ಈ ಹಿಂದೆ ಕೂಡಾ ಬಿಗ್ಬಾಸ್ ತಂಡನನ್ನು ಕಾಂಟೆಕ್ಟ್ ಮಾಡಿತ್ತು. ನಾನು ಒಪ್ಪಿರಲಿಲ್ಲ. ಆದರೆ ಈ ಬಾರಿ ಹ್ಯಾಪಿ ಬಿಗ್ಬಾಸ್ ಅಂತಾ ಹೇಳಿದ್ದಕೆ ನಾನು ಬಂದೆ. ತುಂಬಾ ಬದಲಾವಣೆ ತಂದಿದೆ ಈ ಬಿಗ್ಬಾಸ್ ಎಂದು ಹೇಳಿದ್ದಾರೆ.