ಇದೇ ಕೊನೆ, ಇನ್ನು ನನ್ನ ತಂಟೆಗೆ ಬಂದ್ರೆ ಹುಷಾರ್: ಡ್ರೋನ್ ಪ್ರತಾಪ್ ಎಚ್ಚರಿಕೆ!

Drone Pratha
Published on

ಬೆಂಗಳೂರು: ‘‘ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವವರಿಗೆ ಬುದ್ಧಿ ಕಲಿಸುತ್ತೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಕೀಲರ ಜತೆ ಚರ್ಚಿಸುತ್ತಿದ್ದೇನೆ’’ ಎಂದು ಡ್ರೋನ್ ಪ್ರತಾಪ್ ಎಚ್ಚರಿಕೆ ನೀಡಿದ್ದಾನೆ.

ಆತ ಡ್ರೋನ್ ತಯಾರಿಸಿದ್ದು, ಚಿನ್ನದ ಪದಕ ಪಡೆದಿದ್ದು ನಿಜವೋ ಸುಳ್ಳೋ ಎಂಬ ಬಗ್ಗೆ ಕಳೆದೊಂದು ವಾರದಿಂದ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದ್ದರೂ ಮೌನವಾಗಿದ್ದ ಪ್ರತಾಪ್ ಗುರುವಾರ ಸಂಜೆ ದಿಡೀರನೆ ಖಾಸಗಿ ವಾಹಿನಿಯ ಚರ್ಚೆಯಲ್ಲಿ ಮೂರು ತಾಸುಗಳ ಕಾಲ ಪಾಲ್ಗೊಂಡು ತನ್ನ ವಿರುದ್ಧದ ಆರೋಪಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾನೆ. ಇದನ್ನೂ ಓದಿ: ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?

‘‘ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಕೆಲವರು ಹೇಳುತ್ತಿದ್ದಾರೆ. ನನ್ನ ಫೋಟೋ ಕೆಳಗೆ ಆರ್‌ಐಪಿ (ರೆಸ್ಟ್ ಇನ್ ಪೀಸ್) ಅಂತ ಬರೆದು ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಇಂಥವರ ವಿರುದ್ಧ ಕೋರ್ಟಿಗೆ ಹೋಗುತ್ತೇನೆ. ನನ್ನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲ್ಲಿ ಸಾಧ್ಯವಾದಷ್ಟು ದಾಖಲೆ-ಸಾಕ್ಷೃಗಳನ್ನು ನೀಡಿದ್ದೇನೆ. ಇದೇ ಕೊನೆ. ಪದೇಪದೆ ಬಂದು ಸಾಕ್ಷಾೃಧಾರ ತೋರಿಸಲು ಆಗುವುದಿಲ್ಲ. ನನಗೂ ಬೇಕಾದಷ್ಟು ಕೆಲಸ ಇದೆ. ಇನ್ನು ಮುಂದೆ ನನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ’’ ಎಂದು ಹೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net