ವಿಮೆ ಇಲ್ಲದೇ ವಾಹನ ಚಲಾವಣೆ ಸಲ್ಲ

14 nrp 3..
Published on

ಎನ್.ಆರ್.ಪುರ: ಮೊಬೈಲ್‌ಗೆ ಕರೆನ್ಸಿ ಇಲ್ಲದೇ ಯಾರೂ ಇರುವುದಿಲ್ಲ ಹಾಗೇ ವಾಹನದ ವಿಮೆ ಮಾಡಿಸದೆ ವಾಹನ ಚಲಾಸುವುದಿಲ್ಲ ಎಂದು ಶಪಥ ಮಾಡಬೇಕು ಎಂದು ಪಿಎಸ್‌ಐ ಬಿ.ಎಸ್.ನಿರಂಜನ್ ಗೌಡ ಹೇಳಿದರು.

ಮುತ್ತಿನಕೊಪ್ಪ ಸಮೀಪ ದ್ವಿ ಚಕ್ರ ವಾಹನ ಸವಾರರಿಗೆ ವಾಹನ ವಿಮೆ ಬಗ್ಗೆ ಸ್ಪೆಷಲ್ ರೈಡ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಅರ್ಧ ಗಂಟೆಗೆ ವಿಮೆ ಮಾಡಿಸದ 26 ವಾಹನಗಳು ಪತ್ತೆಯಾಗಿವೆ. ವಿಮೆ ಇದ್ದರೆ ಅಪಘಾತ ಸಂದರ್ಭದಲ್ಲಿ ನಿಮಗೆ ಹಾಗೂ ನೀವು ಮೃತಪಟ್ಟರೆ ನಿಮ್ಮ ಕುಟುಂಬಕ್ಕೆ ವಿಮೆ ಹಣ ಬಂದು ಆಸರೆಯಾಗುತ್ತದೆ. ಆದ್ದರಿಂದ ಎಲ್ಲ ಸವಾರರೂ ಕೂಡ ಕಡ್ಡಾಯವಾಗಿ ವಾಹನ ವಿಮೆ ಮಾಡಿಸಬೇಕು. ಈ ಬಾರಿ ದಂಡ ವಿಧಿಸುವುದಿಲ್ಲ, ವಾಹನಗಳನ್ನು ವಶ ಪಡಿಸಿಕೊಳ್ಳುತ್ತೇವೆ. ವಿಮೆ ಮಾಡಿದ ನಂತರ ದಾಖಲಾತಿ ತೋರಿಸಿ ವಾಹನ ನೀಡಲಾಗುವುದು ಎಂದು ತಿಳಿಸಿದರು.

ಸ್ಥಳಕ್ಕೆ ವಿಮೆ ಮಾಡುವ ಕಂಪನಿ ಅವರನ್ನೂ ಕರೆತಂದಿದ್ದು, ಹಣವಿದ್ದವರಿಂದ ಸ್ಥಳದಲ್ಲಿಯೇ ವಿಮೆ ಪಾವತಿ ಮಾಡಿದರು. ಪಿಎಸ್‌ಐ ಜ್ಯೋತಿ, ಎಎಸ್‌ಐ ಶ್ರೀಧರ್, ಪೊಲೀಸ್ ಸಿಬ್ಬಂದಿ ಮಧು, ಬಿನು, ಪರಮೇಶ್, ಸೋಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net